ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮತ್ತು ಶಾಲೆ ಆರಂಭಕ್ಕೆ ಅವಸರ ಬೇಡ- ಹೆಚ್.ವಿಶ್ವನಾಥ್…

kannada t-shirts

ಮೈಸೂರು,ಆ,25,2020(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಾಗೂ ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಅವಸರ ಬೇಡ ಎಂದು ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಲಹೆ ನೀಡಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ  ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ ಆಗುತ್ತಿದೆ. ಹೀಗಾಗಿ ಶಾಲಾ,ಕಾಲೇಜು, ಆಡಳಿತ ಮಂಡಳಿಯವರನ್ನ ಶಿಕ್ಷಣ ತಜ್ಞರು ಎಂದು ಭ್ರಮಿಸಬೇಡಿ. ಹೆಚ್ಚು ಶಾಲಾ ಕಾಲೇಜು ನಡೆಸುವವರು ಶಿಕ್ಷಣ ತಜ್ಞರಲ್ಲ. ಶಿಕ್ಷಣ ಜ್ಞಾನ ಇಲ್ಲದವರು ಸಮಿತಿಯಲ್ಲಿದ್ದಾರೆ. ಶಿಕ್ಷಣ ನೀತಿ ಸಮರ್ಪಕ ಜಾರಿಯಾಗಬೇಕಾದ್ರೆ ಸಮುದಾಯ ಎಲ್ಲರು ಸಮಿತಿಯಲ್ಲಿರಬೇಕು‌. ಶಿಕ್ಷಣ ಮಾರುವವರನ್ನ ಸಮಿತಿಗೆ ಕರೆಯಬೇಡಿ. ಶಿಕ್ಷಣ ಕಲಿಸುವವರನ್ನ ಕರೆದು ಮಾತನಾಡಿ.. ಅರ್ಥಪೂರ್ಣ ಚರ್ಚೆ ನಡೆಸಿ ನಿರ್ಧಾರ ಮಾಡಿ ಎಂದು ಡಿಸಿಎಂ ಅಶ್ವಥ್ ನಾರಾಯಣ್‌ ಗೆ ಹಳ್ಳಿಹಕ್ಕಿ ಹೆಚ್. ವಿಶ್ವನಾಥ್ ಸಲಹೆ ನೀಡಿದರು.

ಹಾಗೆಯೇ ಶಾಲೆ ಆರಂಭಕ್ಕೂ ಅವಸರ ಬೇಡ. ಶಾಲೆ ಪುನಾರರಂಭಕ್ಕೆ ಫೋಷಕರಾಗಲಿ ಮಕ್ಕಳಾಗಲಿ ಕೇಳುತ್ತಿಲ್ಲ. ಅದ್ದರಿಂದ ಆಡಳಿತ ಮಂಡಳಿಯ ಒತ್ತಡಕ್ಕೆ‌ ಮಣಿಯಬೇಡಿ. ಶಾಲೆಗಳು ಹಾಗೂ ಆಸ್ಪತ್ರೆಗೆ ನಡೆಸೋರು ನಮ್ಮ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ. ಅವರ ಅಭಿಪ್ರಾಯ ಕೇಳಿದ್ರೆ ಶಿಕ್ಷಣ ದುರಂತ ಕಾಣಬೇಕಾಗುತ್ತದೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಮಂತ್ರಿ ಮಂಡಲ‌ ವಿಸ್ತರಣೆ ವಿಚಾರ: ನಾನೇನು ನಿಮ್ಗೆ ಯಡ್ಯೂರಪ್ಪನವರ ಥರ ಕಾಣ್ತಿನಾ…?

ಮಂತ್ರಿ ಮಂಡಲ‌ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದ ಹೆಚ್.ವಿಶ್ವನಾಥ್, ನಾನೇನು ನಿಮ್ಗೆ ಯಡ್ಯೂರಪ್ಪನವರ ಥರ ಕಾಣ್ತಿನಾ. ನನ್ನನ್ನ ಯಾಕೇ ಈ ಪ್ರಶ್ನೆ ಕೇಳ್ತಿರಾ…? ಎಂದು ಕೇಳಿದರು.

ನಾನು ಸಹ ಸಚಿವ ಸಂಪುಟದ ಆಕಾಂಕ್ಷಿ. ಇದು ಮುಖ್ಯಮಂತ್ರಿಗಳಿಗೆ ಬಿಜೆಪಿ ಹೈಕಮಾಂಡ್ ಗೆ ಸಂಬಂಧಿಸಿದ ವಿಷಯ. ಮುಖ್ಯಮಂತ್ರಿಗಳು ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಬರಲು ನನ್ನ ಪಾತ್ರವಿದೆ. ಹಾಗಾಗಿ ನಾನು ಸಹ ಮಂತ್ರಿಮಂಡಲದ ‌ವಿಸ್ತರಣೆಯ ಭಾಗವಾಗಿರುತ್ತೇನೆ ಅನ್ನೋ ವಿಶ್ವಾಸ ಇದೆ ಎಂದು ಹೆಚ್.ವಿಶ್ವನಾಥ್ ಹೇಳಿದರು.no-national-education-policy-school-starts-mysore-h-vishwanath

ವೈದ್ಯರ ಪರ ಬ್ಯಾಟ್ ಬೀಸಿದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್…

ಮೈಸೂರಿನಲ್ಲಿ ಟಿಹೆಚ್ಓ ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಪರ ಬ್ಯಾಟ್ ಬೀಸಿದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್. ಐಎಎಸ್ ಅಧಿಕಾರಿಗಳ ಅಂದಾಕ್ಷಣ ಅವರು ಸರ್ವಜ್ಞರಲ್ಲ. ಪಿಪಿಇ ಕಿಟ್‌ಗಳನ್ನ IAS ಅಧಿಕಾರಿಗಳು ಹಾಕಿಕೊಳ್ಳಲಿ ಗೊತ್ತಾಗುತ್ತೆ. 4 ಗಂಟೆ ಪಿಪಿಇ ಕಿಟ್ ಹಾಕೋದು ಹುಡುಗಾಟಿಕೆ‌ ಅಲ್ಲ. ಜೀವದ ಹಂಗುತೋರೆದು ವೈದ್ಯರು ಕೆಲಸ ಮಾಡ್ತಾರೆ. ಕೆಲವೊಂದು ವಿಚಾರದಲ್ಲಿ ವೈದ್ಯರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಹೇಳಿದರು.

ಮಾಸ್ಕ್ ಗೆ 300 ರೂ ಅಂತೆ ಅದನ್ನ ಕ್ಲೀನ್ ಮಾಡೋ ಕೆಲಸ ಮಾಡೋರಿಗೆ 8.500 ಸಂಬಳವಂತೆ. ಹೆಚ್ಚು ಸಂಬಳ ಕೊಡ್ರಿ ಜನ ಬಂದು ಕೆಲಸ ಮಾಡ್ತಾರೆ. ಮೆಡಿಕಲ್ ವಿಚಾರದವಾಗಿ ಡಿಹೆಚ್ಒಗಳಿಗೆ ಉಸ್ತುವಾರಿ ಕೊಡಿ. ಆಡಳಿತ ವಿಚಾರವನ್ನ ಜಿಲ್ಲಾಡಳಿತ ನೋಡಿಕೊಳ್ಳಲಿ. ಜಿಲ್ಲಾಡಳಿತವೇ ಅನ್ನ ಸಾರು ಜೊತೆ ಇಂಜೆಕ್ಷನ್ ಕೊಡೋಕೆ ಆಗೋಲ್ಲ. ಇದು ಕನ್‌ಪ್ಯೂಷನ್ ಕ್ರೀಯೆಟ್ ಮಾಡುತ್ತೆ. ಮಡಿಕಲ್‌‌  ಬಗ್ಗೆ ಜ್ಞಾನ ಇರೋರನ್ನೆ ಉಸ್ತವಾರಿ ಮಾಡಿ.  ಐಎಎಸ್ ಅಧಿಕಾರಿಗಳು  ಆಡಳಿತ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು.

Key words: no -national education policy – school –starts-Mysore- H. Vishwanath …

website developers in mysore