ಕೋವಿಡ್ ಹೆಸರಲ್ಲಿ ಕೆಲವರು ದುಡ್ಡು ಮಾಡಿದ್ದು ಸಾಕು: ರಾಜ್ಯದಲ್ಲಿ ಮತ್ತೆ ಲಾಕ್‌ ಡೌನ್, ನೈಟ್ ಕರ್ಪ್ಯೂ ಬೇಡ- ಎಂಎಲ್ ಸಿ ಹೆಚ್.ವಿಶ್ವನಾಥ್.

Promotion

ಮೈಸೂರು,ಜನವರಿ,21,2022(www.justkannada.in):  ರಾಜ್ಯದಲ್ಲಿ ಕೊರೊನಾ ಹೆಚ್ಚಳದಿಂದಾಗಿ ಜಾರಿ ಮಾಡಲಾಗಿರುವ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ನೈಟ್ ಕರ್ಪ್ಯೂ ವೀಕೆಂಡ್ ಕರ್ಪ್ಯೂ ಯಾರಿಗೆ.? ಎಲ್ಲಾ ಅಂಗಡಿಗಳು ತೆರೆದು ಜನ ಬರಬಾರದು ಅಂತಾರೆ. ಯಾರಾದರೂ ಹುಚ್ಚ ಈ ರೀತಿ ಆದೇಶ ಕೊಡುತ್ತಾರಾ? ಜನರು ಮಾತ್ರ ಆಚೆ ಬರಬಾರದು ಅಂದರೆ ಹೇಗೆ.? ನನಗೆ ಏನು ಅರ್ಥ ಆಗ್ತಾ ಇಲ್ಲ. ನಿಮಗೆ ಹೇಳುವವರು ಕೇಳುವವರು ಇಲ್ಲವಾ ? ಜನರನ್ನು ಗಾಬರಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಮೂರನೇ ಅಲೆ ಮೊದಲ ರೀತಿ ಇಲ್ಲ. ಇದು ಆರೋಗ್ಯದ ವಿಚಾರ. ಕೋವಿಡ್ ಹೆಸರಲ್ಲಿ ಕೆಲವರು ದುಡ್ಡು ಮಾಡಿದ್ದು ಸಾಕು. ಕೆಲವರು ಕೋವಿಡ್ ಹೆಸರಲ್ಲಿ ಹಣ ಲೂಟಿ ಮಾಡಿದ್ದಾರೆ. ವೈದ್ಯರು ಸಾಲ ಮಾಡಿದ್ದನ್ನು ಎಲ್ಲವನ್ನೂ ತೀರಿಸಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆ ಉಳ್ಳವರಿಗೆ ಅನುಕೂಲ ಮಾಡಲು ಸರ್ಕಾರ ಹೊರಟಿದೆ. ಮಂತ್ರಿನೇ ತಜ್ಞರು ಡಾ ಸುಧಾಕರ್ ಹಲ್ಲಿನ ವೈದ್ಯರು. ಜನರಿಗಿಂತ ತಜ್ಞರು ಯಾರು ಇಲ್ಲ. ಸರ್ಕಾರ ಕೆಲವು ನಿಬಂಧನೆಗಳನ್ನು ಹಾಕಲಿ. ಆದರೆ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ನೈಟ್ ಕರ್ಪ್ಯೂ ಬೇಡ. ಆಯಾ ಜಿಲ್ಲೆಯ ಪರಿಸ್ಥಿತಿಗೆ ತಕ್ಕಂತೆ ಡಿಸಿಗೆ ನಿರ್ಧಾರ ಮಾಡಲು ಬಿಡಿ ಎಂದು ಎಂ.ಎಲ್.ಸಿ ಎಚ್ ವಿಶ್ವನಾಥ್ ಸಲಹೆ ನೀಡಿದರು.

ಲೋಕಸೇವಾ ಆಯೋಗದ ಪಟ್ಟಿ ರದ್ದು ಮಾಡಲು ನ್ಯಾಯಾಲಯದ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಪಟ್ಟಿಯನ್ನು ವಜಾ ಮಾಡಿದೆ. ಹೈಕೋರ್ಟ್ ತೀರ್ಪನ್ನು ಸುಪ್ರಿಂ‌ಕೋರ್ಟ್ ಎತ್ತಿ ಹಿಡಿದಿದೆ. ಸುಪ್ರಿಂ ಕೋರ್ಟ್ ಮೇಲ್ಮನವಿಯನ್ನು ಸಹ ತಳ್ಳಿ ಹಾಕಲಾಗಿದೆ. ಎಲ್ಲಾ ಕೋರ್ಟ್‌ ಗಳು ಒಂದೇ ರೀತಿ ತೀರ್ಮಾನಗಳನ್ನು ನೀಡಿವೆ. ಭ್ರಷ್ಟಾಚಾರ ಸ್ವಜನ ಪಕ್ಷಪಾತ ಜಾತಿ ದುಡ್ಡಿನಿಂದಲೇ ಆಯ್ಕೆಯಾಗಿದೆ. ಇವರನ್ನು ತೆಗೆದುಕೊಂಡು ಹೇಗೆ ಅಧಿಕಾರ ಮಾಡಲು ಸಾಧ್ಯ.? ಎಂದು ಪ್ರಶ್ನಿಸಿದರು.

ಆಯ್ಕೆ ಪಟ್ಟಿಯಲ್ಲಿದ್ದವರು ಅನ್ಯಾಯ ಆಗಿದೆ ಅನ್ನೋ ವಿಚಾರ. ಮೇಲ್ಮನವಿಯನ್ನು ಹೆಚ್ ಡಿ ದೇವೇಗೌಡರಿಗೆ ಸಲ್ಲಿಸಿದ್ದಾರೆ. ಹೆಚ್ ಡಿ ದೇವೇಗೌಡರು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ದೇವೇಗೌಡರ ಪತ್ರದ ಮೇಲೆ ಸಿಎಂ ಶರಾ. ಸುಪ್ರೀಂ ಕೋರ್ಟ್ ತೀರ್ಪಿನ ಮೇಲ್ಮನವಿ ರಾಜಕಾರಣಿಗೆ ಸಲ್ಲಿಸೋದು ಎಷ್ಟು ಸರಿ.? ಎಂದು  ಸಿಎಂ ಶರಾ ಬರೆದಿರುವುದಕ್ಕೆ ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಹೈಕೋರ್ಟ್ ಸುಪ್ರೀಂಕೋರ್ಟ್ ಬಗ್ಗೆ ಗೌರವ ಇಲ್ಲವಾ.? ಲಕ್ಷಾಂತರ ಜನ ಪರೀಕ್ಷೆ ಬರೆದಿದ್ದಾರೆ ಅವರಿಗೆ ಅನ್ಯಾಯ ಆಗಿಲ್ಲವಾ.? ಈ 365 ಜನ ನಿಮ್ಮ ಶಿಫಾರಸ್ಸಿನಿಂದ ಆದವರು. ಇದು ಅಸಂವಿಧಾನಿಕವಾದ ಆಯ್ಕೆಯಾಗಿತ್ತು. ಇವರ ಪರವಾಗಿ ಸಿಎಂ ನಿಲ್ಲಬಾರದು. ಸಿರಿಗರೆ ಮಹಾಸ್ವಾಮಿಗಳಿಗೂ ಸಹ ಈ ಬಗ್ಗೆ  ಮೇಲ್ಮನವಿ. ಸಧರ್ಮ ಪೀಠ ಸುಪ್ರೀಂ ಕೋರ್ಟ್‌ ಗಿಂತ ದೊಡ್ಡದು ಅಂತಾರೆ. ದೇಶದ ಕಾನೂನನ್ನು ರಾಜಕಾರಣಿಗಳು ಸ್ವಾಮೀಜಿಗಳು ತೆಗೆದುಕೊಳ್ಳುತ್ತಿದ್ದಾರೆ. ಈ ರೀತಿ ಆದರೆ ದೇಶದ ಗತಿ ಏನು? ಎಂದು ಹೆಚ್.ವಿಶ್ವನಾಥ್ ಹರಿಹಾಯ್ದರು

ಸಿದ್ದರಾಮಯ್ಯ ಸಹ ಏನು ಮಾಡಲಿಲ್ಲ. ಶ್ಯಾಂಭಟ್‌ ನನ್ನು ಕೆಪಿಎಸ್‌ಸಿಗೆ ಚೇರ್‌ ಮ್ಯಾನ್ ಮಾಡಿದ್ರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ ಎಂದು ಎಂ.ಎಲ್‌ಸಿ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.

Key words: No lockdown- night curfew – state – MLC- H. Vishwanath.