Sunday, August 30, 2026

BDA Apartments

Home Front Page ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಸಮುಚಿತ ಮಾರ್ಗದಲ್ಲೇ ಮನವಿ ಪತ್ರಗಳನ್ನ ಸಲ್ಲಿಸುವಂತೆ ಕೆಎಸ್ ಒಯು ಸುತ್ತೋಲೆ

ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಸಮುಚಿತ ಮಾರ್ಗದಲ್ಲೇ ಮನವಿ ಪತ್ರಗಳನ್ನ ಸಲ್ಲಿಸುವಂತೆ ಕೆಎಸ್ ಒಯು ಸುತ್ತೋಲೆ

ಮೈಸೂರು,ಜನವರಿ,21,2022(www.justkannada.in): ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು  ಮನವಿ ಪತ್ರಗಳನ್ನು ನೇರವಾಗಿ ಕುಲಪತಿಗಳಿಗೆ ಅಥವಾ ಕುಲಪತಿಗಳ ಆಪ್ತ ಕಾರ್ಯಲಯಕ್ಕೆ ಸಲ್ಲಿಸದೆ ಸಮುಚಿತ ಮಾರ್ಗದಲ್ಲೇ ಮನವಿ ಪತ್ರಗಳನ್ನ ಸಲ್ಲಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಕೆಎಸ್ ಒಯು ಕುಲಸಚಿವರು,  ವಿಶ್ವವಿದ್ಯಾನಿಲಯದ ಎಲ್ಲಾ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರು ತಮ್ಮ ಮನವಿ ಪತ್ರಗಳನ್ನು ಸಮುಚಿತ ಮಾರ್ಗದಲ್ಲಿ ಸಲ್ಲಿಸುವಂತೆ ಉಲ್ಲೇಖ(1)ರ ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಅದರಂತೆ ಕ್ರಮ ಅನುಸರಿಸದಿರುವುದು ಕಂಡುಬಂದಿರುತ್ತದೆ.

ಈ ಹಿನ್ನೆಲೆಯಲ್ಲಿ ಮಾನ್ಯಕುಲಪತಿಗಳ ಆದೇಶದ ಮೇರೆಗೆ, ವಿಶ್ವವಿದ್ಯಾನಿಲಯದ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರು ತಮ್ಮ ಯಾವುದೇ ರೀತಿಯ ಮನವಿ ಪತ್ರಗಳನ್ನು ನೇರವಾಗಿ ಮಾನ್ಯ ಕುಲಪತಿಗಳಿಗೆ ಅಥವಾ ಮಾನ್ಯ ಕುಲಪತಿಗಳ ಆಪ್ತ ಕಾರ್ಯಲಯಕ್ಕೆ ಸಲ್ಲಿಸದೆ, ಕಡ್ಡಾಯವಾಗಿ ಸಮುಚಿತ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಭಾಗ/ಕಚೇರಿಯ ಮುಖ್ಯಸ್ಥರು/ಅಧಿಕಾರಿಗಳ ಮುಖಾಂತರ ಅವರ ಶಿಫಾರಸ್ಸಿನೊಂದಿಗೆ ಕುಲಸಚಿವರಿಗೆ ಸಲ್ಲಿಸಿದಲ್ಲಿ ಮಾತ್ರ ನಿಯಮಾನುಸಾರ ಕ್ರಮ ವಹಿಸಲಾಗುವುದೆಂದು ತಿಳಿಸಲಾಗಿದೆ.

ಮುಂದುವರಿದು, ಯಾವುದೇ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರು ತಮ್ಮ ಮನವಿಗಳ ಪ್ರತಿ/ಮುಂಗಡ ಪ್ರತಿಗಳನ್ನು ಮಾಹಿತಿಗಾಗಿ ಮಾನ್ಯ ಕುಲಪತಿಗಳ ಆಪ್ತ ಕಾರ್ಯಾಲಯಕ್ಕೆ ನೇರವಾಗಿ ಸಲ್ಲಿಸಿದಲ್ಲಿ  ಸ್ವೀಕರಿಸುವುದಿಲ್ಲವೆಂದು ಕೆಎಸ್ ಒಯು ಕುಲಸಚಿವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Key words: KSOU –staff- submit -Letters – Instructions