ಫಾರ್ಮ್‌ ಹೌಸ್‌ನಲ್ಲಿ ಹೊಸ ಮನೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ ನಿಖಿಲ್-ರೇವತಿ

ಬೆಂಗಳೂರು, ಆಗಸ್ಟ್ 24, 2020 (www.justkannada.in): ನಿಖಿಲ್ ಕುಮಾರಸ್ವಾಮಿ ತಮ್ಮ ಫಾರ್ಮ್‌ ಹೌಸ್‌ನಲ್ಲೇ ಒಂದು ಸುಂದರವಾದ ಮನೆ ಕಟ್ಟುವ ತೀರ್ಮಾನ ಮಾಡಿದ್ದಾರೆ.

ಇತ್ತೀಚಿಗೆ ದಂಪತಿ ಜೊತೆಸೇರಿ ಭೂಮಿ ಪೂಜೆ ಮಾಡಿದ್ದಾರೆ. ಬಿಡದಿ ಬಳಿ ಇರುವ ಇವರ ಫಾರ್ಮ್ ಹೌಸ್ ನಲ್ಲಿ ಗೌರಿ-ಗಣೇಶ ಹಬ್ಬದ ಶುಭ ದಿನದಂದೇ ಈ ಕಾರ್ಯ ನಡೆದಿದೆ.‌

ಪರಿಸರ ಸ್ನೇಹಿ ಮನೆ ಕಟ್ಟಿಕೊಳ್ಳುವ ಯೋಚನೆಯಲ್ಲಿ ಇದ್ದಾರೆ ನಿಖಿಲ್. ನಿಖಿಲ್‌-ರೇವತಿ ಭೂಮಿ ಪೂಜೆ ಮಾಡುತ್ತಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.