ಶಾಸಕ ಜಿ.ಟಿ ದೇವೇಗೌಡರ ನಿವಾಸಕ್ಕೆ ನಿಖಿಲ್ ಕುಮಾರಸ್ವಾಮಿ  ದಂಪತಿ ಭೇಟಿ, ಮಾತುಕತೆ…

ಮೈಸೂರು,ಡಿಸೆಂಬರ್,4,2020(www.justkannada.in):  ಕಳೆದ ಕೆಲ ದಿನಗಳ ಹಿಂದೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ದಂಪತಿ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರ ನಿವಾಸಕ್ಕೆ ಭೇಟಿನೀಡಿದ್ದು, ಇದು ತೀವ್ರ ಕುತೂಹಲ ಕೆರಳಿಸಿದೆ. Nikhil Kumaraswamy -couple –visit-MLA- GT Deve Gowda's -residence

ಶಾಸಕ ಜಿ.ಟಿ ದೇವಗೌಡರ ನಿವಾಸಕ್ಕೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ದಂಪತಿ ಬೋಜನ ಸವಿದರು. ನಂತರ  ಕೆಲಕಾಲ ಜಿಟಿ ದೇವೇಗೌಡರ ಜೊತೆ ನಿಖಿಲ್ ಕುಮಾರಸ್ವಾಮಿ ಮಾತುಕತೆ ನಡೆಸಿದರು ಎನ್ನಲಾಗಿದೆ. Nikhil Kumaraswamy -couple –visit-MLA- GT Deve Gowda's -residence

ಜಿ.ಟಿ ದೇವೇಗೌಡರು ಜೆಡಿಎಸ್ ನ ಶಾಸಕರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಬಿಜೆಪಿ ನಾಯಕರ ಜತೆ ಗುರುತಿಸಿಕೊಳ್ಳುತ್ತಿದ್ದ ಜಿಟಿ ದೇವೇಗೌಡರ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಮೃದುಧೋರಣೆ ತೋರಿದ ಬೆನ್ನಲ್ಲೆ ನಿಖಿಲ್ ಭೇಟಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Key words: Nikhil Kumaraswamy -couple –visit-MLA- GT Deve Gowda’s -residence