ನೂತನ ಸಿಎಂಗೆ ಶುಭ ಹಾರೈಕೆ: ಇನ್ನಾದರೂ ಉತ್ತರ ಕರ್ನಾಟಕದ ರೈತರ ಸಮಸ್ಯೆ ದೂರವಾಗಲಿ- ಕುರುಬೂರು ಶಾಂತಕುಮಾರ್.

ಮೈಸೂರು,ಜುಲೈ,28,2021(www.justkannada.in):  ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ  ರಾಜ್ಯ ಕಬ್ಬು ಬೆಳೆಗಾರರ ಸಂಘ ಶುಭ ಹಾರೈಸಿದೆ.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ನಿಮ್ಮ ಆಯ್ಕೆಯಿಂದ ಇನ್ನಾದರೂ ಉತ್ತರ ಕರ್ನಾಟಕದ ರೈತರ ಸಮಸ್ಯೆ ದೂರವಾಗಲಿ. ಉತ್ತರ ಕರ್ನಾಟಕದ ಬಹುದಿನದ ಬೇಡಿಕೆ ಮಹದಾಯಿ ನದಿ ನೀರಿನ ಸಮಸ್ಯೆ ಪರಿಹಾರ ಸಿಗಲಿ. ಕಳೆದ ಮೂರು ವರ್ಷಗಳಿಂದ ಉ‌.ಕರ್ನಾಟಕದ ಅತಿವೃಷ್ಠಿ ಪ್ರವಾಹಕ್ಕೆ ತುತ್ತಾಗಿದೆ. ಈ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಅವರ ಕಷ್ಟಗಳಿಗೆ ಪರಿಹಾರ ನೀಡಿ ಎಂದು ಸಲಹೆ ನೀಡಿದರು.special-package-announcement-cm-bs-yeddyurappa-farmer-leader-kuruburu-shanthakumar

ಸಕ್ಕರೆ ನಿಯಂತ್ರಣ ಕಾಯ್ದೆ ೧೯೯೬ ಪ್ರಕಾರ ರೈತರಿಗೆ ೧೪ ದಿನಗಳ ಒಳಗೆ ಹಣ ಪಾವತಿ ಮಾಡಬೇಕು. ಆದರೆ ತಿಂಗಳುಗಳೇ ಕಳೆದರೂ ಇನ್ನೂ ಬಾಕಿ ಹಣ ಪಾವತಿಯಾಗಿಲ್ಲ. ೨೧-೨೨ನೇ ಸಾಲಿನ ಕಬ್ಬಿನ ಎಫ್.ಆಪ್.ಪಿ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಕಬ್ಬಿನ ಮೂಲಕ ಎಥನಾಲ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇದನ್ನ ರೈತರ ಬೆಲ್ಲ ಅರೆಯುವ ಅಲೆಮನೆಗಳಲ್ಲಿಯೂ ಉತ್ಪಾದನೆ ಮಾಡಲು ಬೇಕಾದ ಸೌಕರ್ಯಗಳನ್ನು ನೀಡಿ. ಆಲೆಮನೆಗಳಲ್ಲಿ ಎಥನಾಲ್ ಉತ್ಪಾದನೆಗೆ ಬೇಕಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ. ಈ ಮೂಲಕ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹ ಮಾಡಿದಂತಾಗುತ್ತದೆ ಎಂದು ಹೇಳಿದರು.

ರೈತರು ಬೆಳೆದ ಕಬ್ಬಿಗೆ ಹಾಗೂ ಇತರೆ ವ್ಯವಸಾಯ ಉತ್ಪನ್ನಗಳಿಗೆ ೧೮% ಜಿಎಸ್ಟಿ ಆದ್ರೆ ಚಿನ್ನ ಬೆಳ್ಳಿಯ ಮೇಲೆ ೧-೨ % ಜಿಎಸ್ಟಿ ಇದು ಯಾವ ನ್ಯಾಯ. ರೈತ ಉತ್ಪನ್ನಗಳ ಹಾಗೂ ರಸಗೊಬ್ಬರದ  ಮೇಲೆ ೫% ಜಿ.ಎಸ್.ಟಿಯನ್ನು ಕಡಿತಗೊಳಿಸಬೇಕು. ಕಬ್ಬು ಬೆಳೆಯನ್ನ ಫಸಲ್ ಭೀಮ ಯೋಜನೆಗೆ ವ್ಯಾಪ್ತಿಗೆ ಸೇರಿಸಬೇಕು. ಕೃಷಿ ಸಚಿವೆ ಶೋಭ ಕರಾಂದ್ಲಾಜೆ ಅವರು ರಸಗೊಬ್ಬರ ಸಚಿವ ಭಗವಂತ ಕಾಬು ಅವರನ್ನ ಬೇಟಿ ಮಾಡಿ ಈ ಕುರಿತು ಒತ್ತಾಯಿಸುವಂತೆ ಕುರುಬೂರು ಶಾಂತಕುಮಾರ್  ಆಗ್ರಹಿಸಿದರು.

Key words: new CM- Basavaraj bommai- farmer problem – North Karnataka -Kuruburu Shanthakumar