ದಾವಣಗೆರೆ ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿ ನವೀನ್ ಮೃತದೇಹ ಹಸ್ತಾಂತರ.  

Promotion

ಹಾವೇರಿ,ಮಾರ್ಚ್,21,2022(www.justkannada.in):  ಉಕ್ರೇನ್ ನಲ್ಲಿ ರಷ್ಯಾ ಶೆಲ್ ದಾಳಿಯಲ್ಲಿ ಮೃತಪಟ್ಟ ರಾಜ್ಯದ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಮೃತದೇಹವನ್ನ ಪೋಷಕರು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಿದರು.

ಮಾರ್ಚ್ 1 ರಂದು ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ನವೀನ್ ಬಲಿಯಾಗಿದ್ದರು. 20 ದಿನಗಳ ನಂತರ ಮೃತ ನವೀನ್ ಪಾರ್ಥೀವ ಶರೀರವನ್ನ ತಾಯ್ನಾಡಿಗೆ ತರಲಾಗಿತ್ತು. ಇಂದು ಸ್ವಗ್ರಾಮ ಚಳಗೇರಿಯಲ್ಲಿ ಕುಟುಂಬಸ್ಥರು ಅಂತಿಮ ವಿಧಿವಿಧಾನ ನೆರವೇರಿಸಿದರು. ನಂತರ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಇದಾದ ಬಳಿಕ ನವೀನ್ ಪಾರ್ಥೀವ ಶರೀರವನ್ನ ಮೆರವಣಿಗೆ ಮಾಡಲಾಯಿತು.  ಮೃತ ನವೀನ್ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದರು. ಹೀಗಾಗಿ  ಮೆರವಣಿಗೆ ಬಳಿಕ ದಾವಣಗೆರೆಯ ಎಸ್ ಎಸ್ ಮೆಡಿಕಲ್ ಕಾಲೇಜಿಗೆ ಮೃತದೇಹವನ್ನ ಹಸ್ತಾಂತರಿಸಲಾಗಿದ್ದು ಆ್ಯಂಬುಲೆನ್ಸ್ ಮೂಲಕ ಶಿಫ್ಟ್ ಮಾಡಲಾಗಿದೆ.

Key words: Naveen-dead body – Medical College