Thursday, September 17, 2026

BDA Apartments

ಮೈಸೂರಿನಲ್ಲಿ ಗರ್ಭಿಣಿ ಅನುಮಾನಸ್ಪದ ಸಾವು BDA JK_Adv BDA Adv
Home Crime ಮೈಸೂರಿನಲ್ಲಿ ಗರ್ಭಿಣಿ ಅನುಮಾನಸ್ಪದ ಸಾವು.

ಮೈಸೂರಿನಲ್ಲಿ ಗರ್ಭಿಣಿ ಅನುಮಾನಸ್ಪದ ಸಾವು.

ಮೈಸೂರು,ಮಾರ್ಚ್,21,2022(www.justkannada.in):  ಏಳು ತಿಂಗಳ ಗರ್ಭಿಣಿ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಪತಿ ವಿರುದ್ಧ ಕೊಲೆಗೈದ ಆರೋಪ ಕೇಳಿ ಬಂದಿದೆ.

ಮೈಸೂರಿನ ವಿಜಯನಗರದ ನಿವಾಸಿ ಅಶ್ವಿನಿ(23) ಮೃತಪಟ್ಟ ಗರ್ಭಿಣಿ. ಅಶ್ವಿನಿ ಮೈಸೂರು ತಾಲ್ಲೂಕಿನ ಮೈದನಹಳ್ಳಿ ನಿವಾಸಿ ಪ್ರಮೋದ್ ಎಂಬುವವರನ್ನ ಪ್ರೀತಿಸಿ ಕಳೆದ ವರ್ಷ ಜೂನ್ 13 ರಂದು ಅಂತರ್ಜಾತಿ ವಿವಾಹವಾಗಿದ್ದರು. ಈ ಮಧ್ಯೆ ಅಶ್ವಿನಿಗೆ ಪತಿ ಮನೆಯವರು ಜಾತಿ ವಿಚಾರದಲ್ಲಿ ನಿಂದನೆ ಮಾಡಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಮೈಸೂರಿನಲ್ಲಿ ಗರ್ಭಿಣಿ ಅನುಮಾನಸ್ಪದ ಸಾವು ashini ashini 1

ತವರು ಮನೆಯಲ್ಲಿದ್ದ ಅಶ್ವಿನಿಯನ್ನು ಶುಕ್ರವಾರ ಪ್ರಮೋದ್  ತನ್ನ ಮನೆಗೆ ಕರೆದೊಯ್ದಿದ್ದು ಇದೀಗ ಅಶ್ವಿನಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.  ತನ್ನ ಮಗಳನ್ನ ಪತಿ ಪ್ರಮೋದ್ ಕೊಲೆ ಮಾಡಿರುವುದಾಗಿ ಮೃತ ಅಶ್ವಿನಿ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಇಲವಾಲ ಪೋಲಿಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Pregnant- woman-death –  Mysore