“ನಾಸಾ ಏಜೆನ್ಸಿಯ ಸಿಬ್ಬಂದಿ ವಿಭಾಗದ ಹಂಗಾಮಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಭವ್ಯಾ ಲಾಲ್ ಆಯ್ಕೆ”

Promotion

ವಾಷಿಂಗ್ಟನ್,ಫೆಬ್ರವರಿ,02,2021(www.justkannada.in) : ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಅ್ಯಂಡ್ ಸ್ಪೇಸ್​ ಅಡ್ಮಿನಿಸ್ಟ್ರೇಷನ್​ (ನಾಸಾ) ಏಜೆನ್ಸಿಯ ಸಿಬ್ಬಂದಿ ವಿಭಾಗದ ಹಂಗಾಮಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಭವ್ಯಾ ಲಾಲ್ ಆಯ್ಕೆಯಾಗಿದ್ದಾರೆ.jkಅಮೆರಿಕದ ಉನ್ನತ ಅಧಿಕಾರದಲ್ಲಿ ಭಾರತೀಯರಿಗೆ ಹೆಚ್ಚು ಹೆಚ್ಚು ಸ್ಥಾನ ಸಿಗುತ್ತಿದೆ. ಇದೀಗ ಭವ್ಯಾ ಲಾಲ್​ ಜೊತೆಗೆ ನಾಸಾದ ಅಡಿಯಲ್ಲಿ ಬರುವ ಹಲವಾರು ಹುದ್ದೆಗಳಿಗೆ ಹಲವರನ್ನು ನೇಮಕ ಮಾಡಲಾಗಿದೆ.

ಭವ್ಯಾ ಲಾಲ್ ಎಂಜಿನಿಯರಿಂಗ್ ಮತ್ತು ಸ್ಪೇಸ್​ ಟೆಕ್ನಾಲಜಿಯಲ್ಲಿ ಅನುಭವ ಹೊಂದಿದ್ದು, 2005ರಿಂದ ಡಿಫೆನ್ಸ್ ಅನಾಲಿಸಿಸ್ ಸೈನ್ಸ್ ಅ್ಯಂಡ್ ಟೆಕ್ನಾಲಜಿ ಪಾಲಿಸಿ ಇನ್ಸ್​​ಟಿಟ್ಯೂಟ್​(ಎಸ್​ಟಿಪಿಐ)ನ ಸಂಶೋಧನಾ ವಿಭಾಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆನ್ನು ನಿರ್ವಹಿಸಿರುವ, ಏಜೆನ್ಸಿ ರಿವ್ಯೂ ಟೀಮ್‌ನ ಸದಸ್ಯೆಯಾಗಿ ಭವ್ಯಾ ಲಾಲ್ ಕಾರ್ಯ ನಿರ್ವಹಿಸಿದ್ದರು.

ಇಷ್ಟೇ ಅಲ್ಲದೇ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡಮಿಗಳ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿರುವ ಭವ್ಯಾ ಲಾಲ್ ಅವರನ್ನು, ಅಂತಾರಾಷ್ಟ್ರೀಯ ಗಗನಯಾತ್ರಿಗಳ ಅಕಾಡಮಿಯ ಗೌರವ ಸದಸ್ಯೆಯನ್ನಾಗಿಯೂ ನೇಮಕ ಮಾಡಲಾಗಿದೆ.ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಹಾಗೂ ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯ ಯೋಜನಾ ನೀತಿಗಳನ್ನು ರೂಪಿಸುವಲ್ಲಿ ಭವ್ಯಾ ಲಾಲ್ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

key words : NASA-agency-Staff-section-Provisional-chief-Indian-origin-Choose Bhavya Lal