Wednesday, July 29, 2026

BDA Apartments

Home Crime ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹಲ್ಲೆ ಮಾಡಿದ್ದ ಮೂವರು ಆರೋಪಿಗಳು ಅಂದರ್…

ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹಲ್ಲೆ ಮಾಡಿದ್ದ ಮೂವರು ಆರೋಪಿಗಳು ಅಂದರ್…

ಮಂಗಳೂರು,ಫೆಬ್ರವರಿ,2,2021(www.justkannada.in):  ಹುಟ್ಟುಹಬ್ಬ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯ ಸ್ನೇಹಿತರ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರಿನ ನಿವಾಸಿಗಳಾದ ತ್ರಿಶೂಲ್ ಸಾಲ್ಯಾನ್(19), ಸಂತೋಷ್ ಪೂಜಾರಿ(19), ಡ್ಯಾನಿಶ್ ಅರೆನ್ ಡಿಕ್ರೋಸ್(19) ಬಂಧಿತ ಆರೋಪಿಗಳು.jk

ಜನವರಿ 30 ರಂದು  ಸಂತ್ರಸ್ತ ಯುವತಿ ಮಂಗಳೂರು ನಗರ ಬೆಂದೂರ್ ವೆಲ್ ನಲ್ಲಿರುವ ಹೋಟೇಲ್ ಕುಮಾರ್ ಇಂಟರ್ ನ್ಯಾಶನಲ್‌ನ ಕೊಕನಟ್ ಗೊವ್ ರೆಸ್ಟೋರೆಂಟ್ ನಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಂಧಿತ ಮೂವರು ಆರೋಪಿಗಳು  ಈ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿ  ಹಾಗೂ ಅವಳ ಜೊತೆಯಲ್ಲಿದ್ದ ಸ್ನೇಹಿತರಿಗೆ ಗಂಭೀರ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದರು.three-accused-arrest-rape-assault-young-woman-mangalore

ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಇದೀಗ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

Key words: three accused –arrest- rape – assault – young woman-mangalore