ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆಗೆ ಮೈಸೂರು ವಿವಿ ಸಿಂಡಿಕೇಟ್ ಗ್ರೀನ್ ಸಿಗ್ನಲ್

ಮೈಸೂರು,ಅಕ್ಟೊಬರ್,07,2020(www.justkannada.in) : ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಅಧ್ಯಯನ ವಿಭಾಗ, ಕೇಂದ್ರ ಹಾಗೂ ಘಟಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ವೇತನ ಪರಿಷ್ಕರಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯಿಸಲಾಯಿತು.jk-logo-justkannada-logoಬುಧವಾರ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ವಿವಿಯ ವಿವಿಧ ಅಧ್ಯಯನ ವಿಭಾಗ, ಕೇಂದ್ರ ಹಾಗೂ ಘಟಕ ಕಾಲೇಜುಗಳಲ್ಲಿ ಪ್ರಸ್ತುತ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆಲವು ಅತಿಥಿ ಉಪನ್ಯಾಸಕರುಗಳು ಸಂಭಾವನೆಯನ್ನು ಪರಿಷ್ಕರಿಸುವಂತೆ ಮನವಿ ಮಾಡಿದ್ದರು.Mysore-VV-Syndicate-Green-Signal-Salary-Revision-Guest- Lecturerಈ ಹಿನ್ನೆಲೆಯಲ್ಲಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಹಾಗೂ ಅತಿಥಿ ಉಪನ್ಯಾಸಕರಿಗೆ ಕಳೆದ 5 ವರ್ಷಗಳಿಂದ ವೇತನ ಪರಿಷ್ಕರಣೆ ಮಾಡದಿರುವ ಹಿನ್ನೆಲೆಯಲ್ಲಿ, ವಿಶ್ವವಿದ್ಯಾನಿಲಯದ ಹಣಕಾಸಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕೆಳಕಂಡ ನಿರ್ಣಯಗಳನ್ನು ಸಮಿತಿಯು ಶಿಫಾರಸ್ಸು ಮಾಡಿದೆ ಎಂದು ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ಪ್ರಸ್ತುತ ಶೇ.23ರ ಅಂದಾಜಿನಲ್ಲಿ ವೇತನವನ್ನು ಪರಿಷ್ಕರಿಸುವುದು. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಿಸುವ ಸಂಬಂಧ ವಿವಿಯ writ petition cell ನಿಂದ ಅಭಿಪ್ರಾಯ ಪಡೆಯುವುದು. ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಅತಿಥಿ ಉಪನ್ಯಾಸಕರು ಕಡ್ಡಾಯವಾಗಿ ವರ್ಷದಲ್ಲಿ ಆಯಾ ವಿಷಯದಲ್ಲಿ ಕನಿಷ್ಠ ಒಂದು ಸಂಶೋಧನಾ ಲೇಖನವನ್ನು scopus ಅಥವಾ web of science ನ journal ಗಳಲ್ಲಿ ಪ್ರಕಟಿಸರಬೇಕು ಎಂದು ತಿಳಿಸಲಾಗಿದೆ ಎಂದು ವಿವರಿಸಿದರು.

ಪರಿಸ್ಕರಿಸಿದ ಸಂಭಾವನೆ ಮಾಹಿತಿ
ಎನ್ ಇಟಿ, ಎಸ್ಎಲ್ ಟಿ, ಪಿಎಚ್.ಡಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ (ವಾರದಲ್ಲಿ 4 ಗಂಟೆ ಕರ್ತವ್ಯಕ್ಕೆ ನೀಡುತ್ತಿದ್ದ ಸಂಭಾವನೆಯನ್ನು 7,500 ರೂ. ಇಂದ 8.500 ರೂ. ಹಾಗೂ 8 ಗಂಟೆಗೆ 15 ಸಾವಿರ ದಿಂದ 18,500 ರೂ.ಗೆ 12 ಗಂಟೆಗೆ 22,500 ರಿಂದ 28ಸಾವಿರ ರೂ.ಗೆ) ಪರಿಸ್ಕರಿಸಲಾಗುವುದು.
ಎನ್ಇಟಿ, ಎಸ್ ಎಲ್ ಇಟಿ, ಪಿಎಚ್.ಡಿ ವಿದ್ಯಾರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರಿಗೆ (ವಾರದಲ್ಲಿ 4ಗಂಟೆ ಕರ್ತವ್ಯಕ್ಕೆ ನೀಡುತ್ತಿದ್ದ ಸಂಭಾವನೆಯನ್ನು 6,500 ರೂ. ನಿಂದ 8 ಸಾವಿರ ರೂ.ಗೆ, 8 ಗಂಟೆಗೆ 13 ಸಾವಿರದಿಂದ 16 ಸಾವಿರ ರೂ.ಗೆ, 12 ಗಂಟೆಗೆ 19,500 ರಿಂದ 24ಸಾವಿರ ರೂ.ಗೆ) ಪರಿಷ್ಕರಿಸುವುದಾಗಿ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಲಾಯಿತು.

key words : Mysore-VV-Syndicate-Green-Signal-Salary-Revision-Guest- Lecturer