ರಾಮನಗರದಿಂದ ನನ್ನನ್ನ  ಖಾಲಿ ಮಾಡಿಸಲು 10 ಜನ್ಮ ಎತ್ತಿ ಬರಬೇಕು-ಡಿಕೆ ಬ್ರದರ್ಸ್ ಗೆ ಹೆಚ್.ಡಿಕೆ ಟಾಂಗ್.

ರಾಮನಗರ,ಜನವರಿ,28,2022(www.justkannada.in): ರಾಮನಗರದಿಂದ ನನ್ನನ್ನ ಖಾಲಿ ಮಾಡಿಸಲು ಟಾರ್ಗೆಟ್ ಮಾಡಿದ್ದಾರೆ. ಆದರೆ  ರಾಮನಗರದಿಂದ ನನ್ನನ್ನ  ಖಾಲಿ ಮಾಡಿಸಲು 10 ಜನ್ಮ ಎತ್ತಿ ಬರಬೇಕು ಎಂದು ಡಿಕೆ ಬ್ರದರ್ಸ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಮನಗರದಿಂದ  ನನ್ನನ್ನ ಖಾಲಿ ಮಾಡಿಸೋಕೆ ಆಗುತ್ತಾ.  ರಾಮನಗರದಿಂದ  ಖಾಲಿ ಮಾಡಿಸಲು 10 ಜನ್ಮ ಎತ್ತಿ ಬರಬೇಕು.  ನನ್ನ ಹೃದಯದಲ್ಲಿ ರಾಮನಗರ ಜಿಲ್ಲೆ ಇಟ್ಟಿಕೊಂಡಿದ್ದೀನಿ. ರಾಮನಗರ ಮತ್ತು ನನಗೂ ತಾಯಿ ಮಗನ ಸಂಬಂಧ ಎಂದರು.

ಹಣ ದಬ್ಬಾಳಿಕೆಯಿಂದ ಜೆಡಿಎಸ್ ಭದ್ರಕೋಟೆ ಛೀದ್ರ ಮಾಡಲು ಆಗಲ್ಲ.  10 ಬಾರಿ ಪಾದಯಾತ್ರೆ ಮಾಡಿದ್ರೂ ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಲು ಆಗಲ್ಲ ಎಂದು ಹೆಚ್.ಡಿಕೆ ವಾಗ್ದಾಳಿ ನಡೆಸಿದರು.

Key words: Ramanagara-HD Kumaraswamy- DK Brothers.