ದಸರಾ ಆಚರಣೆಗೆ ಮೈಸೂರು ಕನ್ನಡ ವೇದಿಕೆ ವಿರೋಧ 

Promotion

ಮೈಸೂರು,ಅಕ್ಟೊಬರ್,07,2020(www.justkannada.in) : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಸರಾ ಆಚರಣೆ ಮಾಡುವುದನ್ನು ವಿರೋಧಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.jk-logo-justkannada-logo

ಜಿಲ್ಲಾಧಿಕಾರಿ ಕಚೇರಿ ಬಲಿ ಬುಧವಾರ ಜಮಾವಣೆಗೊಂಡ ಪ್ರತಿಭಟನಕಾರರು ದಸರಾ ಆಚರಣೆ ವಿರೋಧಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ, ಕೊರೊನಾ ಹೆಮ್ಮಾರಿ ತಾರಕಕ್ಕೆ ಏರಿದ್ದು, ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರು ಕೊರೊನಾದ ಕೇಂದ್ರಬಿಂದುವಾಗಿರುವುದು ಆತಂಕದ ಸಂಗತಿ ಎಂದರು.Mysore-Kannada-Forum-Opposes-Dasara-Celebrationಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ದಸರಾ ಅನುದಾನ 15 ಕೋಟಿ ರೂ. ದುರ್ಬಳಕೆ ಮಾಡಿಕೊಂಡು ದಸರಾ ಸಮಿತಿ ರಚಿಸಿ ದೀಪಾಲಂಕಾರಕ್ಕೆ ಮುಂದಾಗಿರುವುದು ಸರ್ಕಾರದ ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದರು.

15ಕೋಟಿ ದಸರಾಗೆ ವಿನಿಯೋಗಿಸುವ ಬದಲು ನಗರದಲ್ಲಿ ಹೆಚ್ಚಿನ ಕ್ಯಾಂಪ್ ತೆರೆದು ಕೊರೋನಾ ರೋಗಿಗಳಿಗೆ ಸ್ಪಂದಿಸಲಿ. ಎಲ್ಲದಕ್ಕೂ ಅಂತರ ಕಾಪಾಡಿ ಎಂದು ಹೇಳುವ ಸರಕಾರವೇ ಎಡವಟ್ಟು ಮಾಡಿಕೊಂಡು ದಸರಾದಲ್ಲಿ ಪಾಲ್ಗೊಳ್ಳುವ ನಾಗರಿಕರು, ಆರಕ್ಷಕರು, ಗೃಹರಕ್ಷಕರಿಗೆ ಕೊರೋನಾ ವಕ್ಕರಿಸಿದರೆ ಇದರ ವೆಚ್ಚವನ್ನೂ ಸರಕಾರ ಭರಿಸುವುದೇ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನೆಯಲ್ಲಿ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಬಾಬು, ಅರವಿಂದ, ಬೀಡಾಬಾಬು, ಪರಿಸರ ಚಂದ್ರು, ಸುನೀಲ್, ಸ್ವಾಮಿಗೌಡ, ಮಹದೇವಸ್ವಾಮಿ ಇತರರು ಭಾಗವಹಿಸಿದ್ದರು.

key words : Mysore-Kannada-Forum-Opposes-Dasara-Celebration