ಬಿಜೆಪಿಯವರ ಮೇಲೂ ಗಂಭೀರ ಆರೋಪಗಳಿವೆ : ಅವರ ಮನೆ ಮೇಲೂ ದಾಳಿ ಮಾಡಲಿ- ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹ…

ವಿಜಯಪುರ,ಅಕ್ಟೋಬರ್,7,2020(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿ ದುರುದ್ದೇಶಪೂರಿತ. ಬಿಜೆಪಿಯವರ ಮೇಲೂ ಗಂಭೀರ ಆರೋಪಗಳಿವೆ ; ಅವರ ಮೇಲೂ ದಾಳಿ ಮಾಡಲಿ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.jk-logo-justkannada-logo

ವಿಜಯಪುರದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಎಂ.ಬಿ ಪಾಟೀಲ್, ಕೇಂದ್ರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ನಡೆಸುವ ಮೂಲಕ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣೆಗಳು ಎದುರಾದಾಗ ಮಾತ್ರವೇ ದಾಳಿ ಮಾಡುತ್ತಾರೆ. ಇದು ದುರುದ್ದೇಶಪೂರಿತ ದಾಳಿ. ರಾಜಕೀಯ ದುರುದ್ದೇಶದಿಂದ ದಾಳಿಯಾಗುತ್ತಿದೆ. ಕಾಂಗ್ರೆಸ್ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಲು ಈ ರೀತಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.kpcc-president-dk-shivakumar-cbi-attack-former-minister-mb-patil

ಉಪಚುನಾವಣೆಯಲ್ಲಿ ಸೋಲುವ ಭೀತಿ ಹತಾಶೆಯಿಂದ ಈ ರೀತಿ ಕೇಂದ್ರ ಸರ್ಕಾರ ದಾಳಿ ನಡೆಸುತ್ತಿದೆ. ಬಿಜೆಪಿಯವರ ಮೇಲೂ ಸಾಕಷ್ಟು ಆರೋಪಗಳಿವೆ. ಅವರ ಮನೆ ಮೇಲೂ ದಾಳಿ ನಡೆಸಲಿ ನೋಡೋಣ ಎಂದು ಎಂ.ಬಿ ಪಾಟೀಲ್ ಕಿಡಿಕಾರಿದರು.

Key words: KPCC-president-dk Shivakumar-cbi-attack- Former minister -MB Patil