ಜನಾಕ್ರೋಶಕ್ಕೆ ಮಣಿದ ಸರ್ಕಾರ: ಮಾಸ್ಕ್ ದಂಡದ ಪ್ರಮಾಣ ಇಳಿಕೆ….

ಬೆಂಗಳೂರು,ಅಕ್ಟೋಬರ್,7,2020(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರ ಜೋರಾಗಿರುವ ಹಿನ್ನೆಲೆ ಮಾಸ್ಕ್ ಹಾಕದೇ ಓಡಾಡುವವರಿಗೆ ದುಬಾರಿ ದಂಡ ಹಾಕಿದ್ದ ರಾಜ್ಯ ಸರ್ಕಾರ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ದಂಡದ ಪ್ರಮಾಣವನ್ನ ಇಳಿಕೆ ಮಾಡಿದೆ.jk-logo-justkannada-logo

ನಗರ ಪ್ರದೇಶಗಳಲ್ಲಿ ಒಂದು ಸಾವಿರ ರೂ ಇದ್ದ ದಂಡದ ಪ್ರಮಾಣವನ್ನ 250 ರೂಪಾಯಿಗೆ ಹಾಗೂ ಗ್ರಾಮೀಣ ಭಾಗದಲ್ಲಿ 500 ರೂ ಇದ್ಧ ದಂಡದ ಪ್ರಮಾಣವನ್ನು 100 ರೂಗೆ ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. corora-public-govrnament- Reduction -mask -fine

ರಾಜ್ಯದಲ್ಲಿ ಹರಡುತ್ತಿರುವ ಕೊರೋನಾ ಮಹಾಮಾರಿ ತಡೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರ ಮಾಸ್ಕ್ ಹಾಕದೆ ಓಡಾಡುವವರಿಗೆ ನಗರ ಪ್ರದೇಶದಲ್ಲಿ 1000 ರೂ ಹಾಗೂ ಗ್ರಾಮೀಣ ಭಾಗದಲ್ಲಿ 500 ರೂ ದಂಡ ಹಾಕುವಂತೆ ಆದೇಶಿಸಿತ್ತು. ಆದರೆ ಸರ್ಕಾರದ ದುಬಾರಿ ದಂಡಕ್ಕೆ ಜನ ಬೇಸತ್ತು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದರು.  ಹೀಗಾಗಿ  ಸಾರ್ವಜನಿಕ ವಲಯದ ಆಕ್ರೋಶಕ್ಕೆ ಮಣಿದ ಸರ್ಕಾರ ಇದೀಗ ದಂಡದ ಪ್ರಮಾಣ ಇಳಿಕೆ ಮಾಡಿದೆ.

Key words: corora-public-govrnament- Reduction -mask -fine