ಮೈಸೂರಿನಲ್ಲಿ ಹಸುಗಳ ಕೊಂಬು ದಾಸ್ತಾನು ಪತ್ತೆ : ಗೊಡೌನ್ ಮೇಲೆ ಪೊಲೀಸರ ದಾಳಿ

ಮೈಸೂರು,ನವೆಂಬರ್,06,2020(www.justkannada.in) : ಮೈಸೂರಿನಲ್ಲಿ ಹಸುಗಳ ಕೊಂಬು ದಾಸ್ತಾನು ಪತ್ತೆಯಾಗಿದ್ದು, ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೊಡೌನ್ ಮೇಲೆ ಮೇಟಗಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.jk-logo-justkannada-logoಶುಕ್ರವಾರ ನಗರದ ಮೇಟಗಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಇರುವ ಗೊಡೌನ್ ಮೇಲೆ ಪೊಲೀಸರು ದಾಳಿ ನಡೆಸಿ  ಗೊಡೌನ್ ಗೆ ಬೀಗ ಹಾಕಿದ್ದಾರೆ.

ಗೊಡೌನ್ ನಿರ್ವಹಣೆ ಮಾಡ್ತಿದ್ದ ವ್ಯಕ್ತಿ  ಬಂಧನ 

ಗೊಡೌನ್ ನಿರ್ವಹಣೆ ಮಾಡ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು, ಅಕ್ರಂ ಎಂಬಾತನಿಗೆ ಸೇರಿದ ಗೊಡೌನ್ ನಲ್ಲಿ ರಾಶಿ, ರಾಶಿ ಹಸು ಹಾಗೂ ಎಮ್ಮೆಗಳ ಕೊಂಬು ದಾಸ್ತಾನು ಪತ್ತೆಯಾಗಿದೆ. ಕೆಲವು ತಿಂಗಳ ಹಿಂದೆ ಇದೇ ಸ್ಥಳದ ಮೇಲೆ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು.

ರಾಶಿ ರಾಶಿ ಹಸುಗಳ ಕೊಂಬು ಬಂದಿದ್ದಾದ್ರೂ ಎಲ್ಲಿಂದ..?

ರಾಶಿ ರಾಶಿ ಹಸುಗಳ ಕೊಂಬು ಬಂದಿದ್ದಾದ್ರೂ ಎಲ್ಲಿಂದ..? ಗೋಹತ್ಯೆ ಲಿಂಕ್ ಇದ್ಯಾ..? ಈ ಹಿಂದೆ ದಾಳಿ ನಡೆಸಿದ ನಂತರವೂ ದಾಸ್ತಾನು ಬಂದಿದ್ದಾದರೂ ಹೇಗೆ..? ಹಲವಾರು ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಬೇಕಿದೆ. ವಶಕ್ಕೆ ಪಡೆದ ವ್ಯಕ್ತಿಯನ್ನ ಮೇಟಗಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Mysore-horn-cows-Inventory-Detection-Godown-Attacked-elite-police

key words : Mysore-horn-cows-Inventory-Detection-Godown-Attacked-elite-police