ಅನ್ ಲಾಕ್ ಬೆನ್ನಲ್ಲೆ ಶುರುವಾಯ್ತ ಸರಗಳ್ಳರ ಕೈಚಳಕ:  ಮಹಿಳೆಯ ಸರ ಕಸಿದು ಎಸ್ಕೇಪ್…

mysore-  Woman-chain snatch -escape.
Promotion

ಮೈಸೂರು,ಜೂ,1,2020(www.justkannada.in): ಮಹಾಮಾರಿ ಕೊರೋನಾ ಅಟ್ಟಹಾಸದಿಂದ ಲಾಕ್ ಡೌನ್ ಮಾಡಿದ್ದ  ವೇಳೆ ಕಡಿಮೆಯಾಗಿದ್ದ ಅಪರಾಧ ಪ್ರಕರಣಗಳು ಇದೀಗ ಅನ್‌ಲಾಕ್ ಬೆನ್ನೆಲ್ಲೇ  ಹೆಚ್ಚಾಗಿದೆ.

ಮೈಸೂರಿನಲ್ಲಿ ಸರಗಳ್ಳರು ತಮ್ಮ ಕೈಚಳಕ ಶುರುಮಾಡಿದ್ದು ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ವಿಜಯನಗರ ಠಾಣಾ ವ್ಯಾಪ್ತಿಯ ರೈಲ್ವೆ ಬಡಾವಣೆ ಬಳಿ ನಡೆದಿದೆ.  ಸವಿತಾ(೨೭) ಮಾಂಗಲ್ಯ ಸರ ಕಳೆದುಕೊಂಡ ಗೃಹಿಣಿ.mysore-  Woman-chain snatch -escape.

ದೇವರ ಕಾರ್ಯ ಮುಗಿಸಿ ಸ್ಕೂಟರ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸವಿತಾರನ್ನ ಹಿಂಬಾಲಿಸಿದ ಇಬ್ಬರು ಸರಗಳ್ಳರು, ಹಂಪ್ ಬಳಿ ಸ್ಕೂಟರ್ ಸ್ಲೋ ಮಾಡಿದಾಗ ಸರ ಕಿತ್ತು ಪರಾರಿಯಾಗಿದ್ದಾರೆ. ಸುಮಾರು ೪೦ ಗ್ರಾಂ ಚಿನ್ನದ ಸರ ಕಸಿದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-  Woman-chain snatch -escape.