Saturday, September 19, 2026

BDA Apartments

ಮೃತ ಕೊರೋನಾ ವಾರಿಯರ್ ಕುಟುಂಬಕ್ಕೆ ಸಾಂತ್ವಾನ ಹೇಳಿ ನೆರವಿನ ಭರವಸೆ ನೀಡಿದ ಸಿ...
Home Front Page ಮೃತ ಕೊರೋನಾ ವಾರಿಯರ್ ಕುಟುಂಬಕ್ಕೆ ಸಾಂತ್ವಾನ ಹೇಳಿ ನೆರವಿನ ಭರವಸೆ ನೀಡಿದ ಸಿಎಂ ಬಿಎಸ್ ವೈ….

ಮೃತ ಕೊರೋನಾ ವಾರಿಯರ್ ಕುಟುಂಬಕ್ಕೆ ಸಾಂತ್ವಾನ ಹೇಳಿ ನೆರವಿನ ಭರವಸೆ ನೀಡಿದ ಸಿಎಂ ಬಿಎಸ್ ವೈ….

ಬೆಂಗಳೂರು,ಜೂ,1,2020(www.justkannada.in):  ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟ ಆ್ಯಂಬುಲೆನ್ಸ್ ಚಾಲಕ ಉಮೇಶ್ ಫಕೀರಪ್ಪ ಅವರ  ಕುಟುಂಬಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಸಾಂತ್ವಾನ ಹೇಳಿದ್ದಾರೆ.

ಮೃತ ಕೊರೋನಾ ವಾರಿಯರ್ ಉಮೇಶ್ ಫಕೀರಪ್ಪ ಅವರ ಪತ್ನಿಗೆ ಸಿಎಂ ಬಿಎಸ್ ಯಡಿಯೂರಪ್ಪ ದೂರವಾಣಿ ಕರೆಮಾಡಿ ಸಾಂತ್ವಾನ ಹೇಳಿದ್ದು, ಸರ್ಕಾರದಿಂದ ಕೊಡುವ ಎಲ್ಲಾ ನೆರವನ್ನ ನೀಡುವುದಾಗಿ ಭರವಸೆ ನೀಡಿದ್ದಾರೆ.CM BS yeddyurappa- dead -Corona Warrior- family

ಆ್ಯಂಬುಲೆನ್ಸ್ ಚಾಲಕ ಉಮೇಶ್ ಫಕೀರಪ್ಪ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಡ್ಯೂಟಿ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಪತ್ನಿ ತಾಳಿಯನ್ನ ಮಾರಿ ತನ್ನ ಪತಿ ಉಮೇಶ್ ಪಕೀರಪ್ಪ ಅವರ ಅಂತ್ಯಸಂಸ್ಕಾರವನ್ನ ನೆರವೇರಿಸಿತ್ತು. ಈ ನಡುವೆ ಅವರ ಕುಟುಂಬ ಸಂಕಷ್ಟದಲ್ಲಿದ್ದು ಈ ಹಿನ್ನೆಲೆ ನೆರವು ನೀಡುವುದಾಗಿ ಸಿಎಂ ಬಿಎಸ್ ವೈ ಭರವಸೆ ನೀಡಿದ್ದಾರೆ.

Key words: CM BS yeddyurappa- dead -Corona Warrior- family