ನ.21ರಿಂದ ಮೈಸೂರು ವಿವಿ ಬಯಲು ರಂಗಮಂದಿರ, ಸೆನೆಟ್ ಭವನದಲ್ಲಿ ಕೋವಿಡ್-19 ಟೆಸ್ಟ್ : ಪ್ರೊ.ಆರ್.ಶಿವಪ್ಪ

ಮೈಸೂರು,ನವೆಂಬರ್,19,2020(www.justkannada.in) :  ರಾಜ್ಯ ಸರ್ಕಾರದ ಸುತ್ತೋಲೆಯಂತೆ ಮೈಸೂರು ವಿವಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೋವಿಡ್ ಟೆಸ್ಟ್ ಕಾರ್ಯಕ್ರಮವನ್ನು ಭಾರತದಾದ್ಯಂತ ಐಸಿಎಂಆರ್ ಸರ್ವರ್ ನ ತಾಂತ್ರಿಕ ತೊಂದರೆಯಿಂದಾಗಿ ಅರ್ಧಕ್ಕೆ ಸ್ಥಗೀತಗೊಳಿಸಲಾಯಿತು.kannada-journalist-media-fourth-estate-under-lossಸರ್ಕಾರವು ವಿವಿಯ ಎಲ್ಲಾ ಬೋಧಕ, ಬೋಧಕೇತರ ಹಾಗೂ ಸಂಶೋಧನಾ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ -19 ಟೆಸ್ಟ್ ಮಾಡುವಂತೆ ತಿಳಿಸಿದ್ದು, ಅದರಂತೆ ಗುರುವಾರ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಐಸಿಎಂಆರ್ ಸರ್ವರ್ ನ ತಾಂತ್ರಿಕ ತೊಂದರೆಯಿಂದ ಅರ್ಧಕ್ಕೆ ಸ್ಥಗೀತಗೊಳಿಸಲಾಯಿತು.

ಈ ಕುರಿತು ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾಹಿತಿ ನೀಡಿ, ಕೋವಿಡ್-19 ಟೆಸ್ಟ್ ಅನ್ನು ಸರ್ಕಾರದ ಸುತ್ತೋಲೆಯಂತೆ ಮತ್ತೆ 21ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರಗೆ ಮೈಸೂರು ವಿಶ್ವವಿದ್ಯಾನಿಲಯ ಬಯಲು ರಂಗಮಂದಿರ, ಸೆನೆಟ್ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿವಿ ಸಿಬ್ಬಂದಿಗೆ ಕೋವಿಡ್-19 ಟೆಸ್ಟ್ ಕಡ್ಡಾಯ

ವಿವಿಯ ಎಲ್ಲಾ ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಉಪನ್ಯಾಸಕರು, ಅತಿಥಿ ಉಪನ್ಯಾಸಕರು, ಕಚೇರಿ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕೋವಿಡ್ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಸೆನೆಟ್ ಭವನದಲ್ಲಿ ಬೋಧಕ ವರ್ಗದವರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಬಯಲು ರಂಗಮಂದಿರದಲ್ಲಿ ಅಧ್ಯಾಪಕೇತರ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್-19 ಟೆಸ್ಟ್ ಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ತಿಳಿಸಿದರು.

Mysore VV-November 21-Plain-theater-Senate House-Covid-19 Test-Prof.R.Shivappa

ಈ ಸಂದರ್ಭ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್, ವಿಜ್ಞಾನ ಭವನ ಕಾರ್ಯಕ್ರಮ ಸಂಯೋಜನಾಧಿಕಾ ಚಂದ್ರನಾಯಕ, ಮಹಾರಾಜ ಕಾಲೇಜು ವೈದ್ಯಾಧೀಕಾರಿ ಡಾ.ಎಂ.ಎಸ್.ಬಸವರಾಜು, ಪ್ರಾಧ್ಯಪಕರಾದ ಡಾ.ಶುಭಗೋಪಾಲ್, ಸಹಾಯಕ ಪ್ರಾಧ್ಯಾಪಕ ಡಾ.ತೇಜಸ್ ಬಾಬ ಸಿ.ಕಲ್ಪವಾಡಿ, ಡಾ.ಸಿ.ಡಿ.ಮೋಹನ್ ಇತರರು ಭಾಗವಹಿಸಿದ್ದರು.

English summary….

Covid-19 test at open air auditorium, Senate Bhavan on Nov. 21: Prof. R. Shivappa
Mysuru, Nov. 19, 2020 (www.justkannada.in): Mysore University Registrar Prof. R. Shivappa has informed that the Covid-19 test will be held on November 21, from 10 am to 1 pm at the Mysore University open air theatre and Senate bhavan.Mysore VV-November 21-Plain-theater-Senate House-Covid-19 Test-Prof.R.Shivappa
All the teaching staff of PG departments, guest lecturers, office staff and research students are asked to compulsorily undergo the test.

key words : Mysore VV-November 21-Plain-theater-Senate House-Covid-19 Test-Prof.R.Shivappa