ಮೈಸೂರು ವಿವಿ ಸಂಯೋಜಿತ ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ…? : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ

ಮೈಸೂರು,ಫೆಬ್ರವರಿ,12,2021(www.justkannada.in) : ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರ ಸೂಚನೆ ಮೇರೆಗೆ ವಿವಿ ವ್ಯಾಪ್ತಿಯ 32 ಕಾಲೇಜುಗಳ ಪ್ರಾಂಶುಪಾಲರಿಗೆ ನ್ಯಾಕ್ ಮಾನ್ಯತೆಗೆ ಒಳಪಡಿಸಲು ಕ್ರಿಯಾ ಯೋಜನೆ ಪ್ರೇರೆಪಣಾ ಸಭೆ ನಡೆಸಲಾಯಿತು.Mysore VV,Combined,colleges,Nak exposure?,Chancellor,Prof.G.Hemant Kumar,presidency,Meetingಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಶುಕ್ರವಾರ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ ಪಡೆಯಲು ಕ್ರೀಯಾ ಯೋಜನೆ ಸಿದ್ದಪಡಿಸುವ ಕುರಿತು ಪ್ರಾಂಶುಪಾಲರ ಪ್ರೇರೆಪಣಾ ಸಭೆ ನಡೆಸಲಾಯಿತು.

ಈ ಸಂದರ್ಭ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರ ಸೂಚನೆಯಂತೆ ಶೈಕ್ಷಣಿಕ ವರ್ಷದಿಂದ ಶೇಕಡ.30ರಷ್ಟು ಕಾಲೇಜುಗಳ ನ್ಯಾಕ್ ಮಾನ್ಯತೆ ಪಡೆಯುವ ಗುರಿ ಇಟ್ಟುಕೊಂಡು ಮೈಸೂರು ವಿವಿಯು 32 ಕಾಲೇಜುಗಳನ್ನು ಗುರತಿಸಿದ್ದು, ನ್ಯಾಕ್ ಮಾನ್ಯತೆಗೆ ಒಳಪಡಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.  Mysore VV,Combined,colleges,Nak exposure?,Chancellor,Prof.G.Hemant Kumar,presidency,Meeting

ವಿವಿ ವ್ಯಾಪ್ತಿಯಲ್ಲಿರುವ 230 ಕಾಲೇಜುಗಳ ಪೈಕಿ ಸುಸಜ್ಜಿತ ಕಟ್ಟಡ ಹಾಗೂ ಸಿಬ್ಬಂದಿಯುಳ್ಳ 12 ಸರಕಾರಿ ಹಾಗೂ 20 ಖಾಸಗಿ ಕಾಲೇಜುಗಳು ಸೇರಿದಂತೆ ಒಟ್ಟು 32 ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇದು ಮೊದಲ ಹಂತದ ಸಭೆಯಾಗಿದ್ದು, ನ್ಯಾಕ್ ಮಾನ್ಯತೆ ಪಡೆದುಕೊಂಡರೆ ಕಾಲೇಜುಗಳಿಗೆ ಹೆಚ್ಚು ಅನುಕೂಲಗಳು ದೊರೆಯಲಿವೆ. ಶೈಕ್ಷಣಿಕ ಗುಣಮಟ್ಟ ಮತ್ತಷ್ಟು ಹೆಚ್ಚಾಗಲಿದೆ. ಈ ಕಾಲೇಜುಗಳ ಮೇಲೆ ವಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲಿಯು ವಿಶ್ವಾಸ ಹೆಚ್ಚಾಗಲಿದೆ ಎಂದು ಹೇಳಿದರು.

ಹೀಗಾಗಿ, ಇಂದಿನಿಂದಲೇ ಈ 32 ಕಾಲೇಜುಗಳು ನ್ಯಾಕ್ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಸಂಬಂಧ ಪ್ರಯತ್ನಪಡಬೇಕು.  ನ್ಯಾಕ್ ಮಾನ್ಯತೆಪಡೆಯಲು ಏಳು ಹಂತಗಳಿದ್ದು, ಅವುಗಳ ಕುರಿತು ಮುಂದಿನ ದಿನಗಳಲ್ಲಿ ತರಬೇತಿ ನೀಡಲಾಗುವುದು. ಶಿಕ್ಷಣ ಇಲಾಖೆಯ ಸೂಚನೆಯಂತೆ ಮುಂದಿನ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.Mysore VV,Combined,colleges,Nak exposure?,Chancellor,Prof.G.Hemant Kumar,presidency,Meeting

ಕಾರ್ಯಗಾರದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಜಂಟಿ ಕಾರ್ಯದರ್ಶಿ ಮುಗೇಶಪ್ಪ, ಪಿಎಂಇಬಿ ನಿರ್ದೇಶಕ ಎನ್.ಕೆ.ಲೋಕನಾಥ್, ಐಕ್ಯೂಎಸ್ಸಿ ನಿರ್ದೇಶಕ ಹರಿನಾರಾಯಣ, ಕೆ.ಜೆ.ಲೋಹಿತ್ ಇತರರು ಉಪಸ್ಥಿತರಿದ್ದರು.

key words : Mysore VV-Combined-colleges-Nak exposure?-Chancellor-Prof.G.Hemant Kumar-presidency-Meeting