“ಮೈಸೂರು ವಿವಿಯಿಂದ ಅಣ್ಣವ್ರಿಗೆ ಗೌ.ಡಾಕ್ಟರೇಟ್ ದೊರೆತು ಇಂದಿಗೆ 45 ವರ್ಷ”

Promotion

ಮೈಸೂರು,ಫೆಬ್ರವರಿ,08,2021(www.justkannada.in)  :  ಕನ್ನಡ ಚಿತ್ರರಂಗದ ಧ್ರುವತಾರೆ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ದೊರೆತು ಇಂದಿಗೆ 45 ವರ್ಷಗಳು ತುಂಬಿದ್ದು, ಈ ಕುರಿತು ನಟ ಶಿವರಾಜ್ ಕುಮಾರ್ ಟ್ವೀಟ್ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.ವಿಶ್ವ ಚಿತ್ರರಂಗದ ಇತಿಹಾಸದಲ್ಲಿ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲ ನಟರಾಗಿದ್ದು, ಅಣ್ಣಾವ್ರಿಗೆ ಡಾಕ್ಟರೇಟ್ ಪದವಿ ದೊರೆತು ಇಂದಿಗೆ 45 ವರ್ಷಗಳು(8/2/1976) ತುಂಬಿವೆ.ಇಂತಹ ನಟನನ್ನು ಪಡೆದ ನಾವೇ ಧನ್ಯರು ಎಂದು .ಡಾಕ್ಟರೇಟ್ ಪದವಿ ಸ್ವೀಕರಿಸಿ ಡಾ.ರಾಜ್ ಕುಮಾರ್ ಅವರು ಭಾಷಣ ಮಾಡುತ್ತಿರುವ ಫೋಟೋ ಹಂಚಿಕೊಳ್ಳುವ ಮೂಲಕ ಹರ್ಷವ್ಯಕ್ತಪಡಿಸಿದ್ದಾರೆ.

key words : Mysore Vivi-Rajkumar-Doctorate-today-45 years