ಟೆಸ್ಟ್ ಕ್ರಿಕೆಟ್: 337ಕ್ಕೆ ಟೀಂ ಇಂಡಿಯಾ ಆಲ್ಔಟ್! ಇಂಗ್ಲೆಂಡ್ ಬಿಗಿ ಹಿಡಿತ

ಚೆನ್ನೈ, ಫೆಬ್ರವರಿ 08, 2021 (www.justkannada.in): ಕ್ರಿಕೆಟ್ ಇಂಗ್ಲೆಂಡ್ ವಿರುದ್ಧ ಟೆಸ್ಟ್    ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 337 ರನ್ ಗೆ ಆಲೌಟ್ ಆಗಿದೆ.

ನಿನ್ನೆ 6 ವಿಕೆಟ್ ಕಳೆದುಕೊಂಡು 257 ಪಡೆದಿದ್ದ ಭಾರತ, ಇಂದು 337 ರನ್ ಗಳಿಗೆ ಆಲೌಟ್ ಆಗಿದೆ. ಆ ಮೂಲಕ ಮೊದಲ 241 ರನ್ ಗಳ ಹಿನ್ನಡೆ ಅನುಭವಿಸಿದೆ.

ವಾಷಿಂಗ್ಟನ್ ಸುಂದರ್ 85 ರನ್ ಗಳಿಸಿ ಭಾರತಕ್ಕೆ ನೆರವಾದರು.  ಇಂಗ್ಲೆಂಡ್ ಪರ ಜೇಮ್ಸ್ ಆಯಂಡರ್ಸನ್, ಜೋಫ್ರಾ ಆರ್ಚರ್, ಜಾಕ್ ಲೀಚ್ ತಲಾ 2 ವಿಕೆಟ್ ಪಡೆದರೆ, ಡೊಮೆನಿಕ್ ಬೆಸ್ 4 ವಿಕೆಟ್ ಪಡೆದು ಮಿಂಚಿದರು.

ಇದೀಗ 2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ಗೆ ಆರಂಭಿಕ ಆಘಾತ​ವಾಗಿದೆ. ಇದೀಗ ಒಂದು ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ 20 ರನ್ ಗಳಿಸಿದೆ.