ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅವರಿಗೆ ಗೌರವ ಫೆಲೊಶಿಪ್.

Mysore-university-vice.chancellor-hemanth.kumar-vc-uom-fellowship

 

ಮೈಸೂರು, ನವೆಂಬರ್ ೮, ೨೦೨೧ (www.justkannada.in): ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಕೆಎಸ್‌ಟಿಎ), ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅವರಿಗೆ ಗೌರವ ಫೆಲೊಶಿಪ್ ನೀಡಿದೆ.

ವಿಜ್ಞಾನ, ತಂತ್ರಜ್ಞಾನ, ಕೃಷಿ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ (STEAM) ಕ್ಷೇತ್ರಗಳಲ್ಲಿ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ, ಅಕಾಡೆಮಿಯ ಗೌರವ ಫೆಲೊಶಿಪ್ (Honorary Fellowship of the Academy) ಅನ್ನು ನೀಡಿದೆ.
ಈ ಗೌರವ ಫೆಲೊಶಿಪ್‌ನೊಂದಿಗೆ ಪ್ರೊ. ಜಿ. ಹೇಮಂತ್ ಕುಮಾರ್ ಅವರು, ಕರ್ನಾಟಕ ಮೂಲದ ವಿಜ್ಞಾನಿಗಳು, ತಂತ್ರಜ್ಞನರು ಹಾಗೂ ವೈಜ್ಞಾನಿಕ ಸಂವಹನಾಕರರನ್ನು, ಅಕಾಡೆಮಿಯ ೧೨ ವಿವಿಧ ಕ್ಷೇತ್ರಗಳಲ್ಲಿ ಗೌರವ ಫೆಲೊಶಿಪ್‌ಗಳು ಹಾಗೂ ಫೆಲೊಶಿಪ್‌ಗಳಿಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಜೊತೆಗೆ, ನಮೂದಿಸಿರುವ ನಮೂನೆಯ ಪ್ರಕಾರ ವರ್ಷವಿಡೀ ಪ್ರತಿಷ್ಠಿತ ವೈಯಕ್ತಿಕ ಶಿಕ್ಷಣ ತಜ್ಞರು/ಸಂಶೋಧಕರಿಗೆ ಪಾವತಿ ಸಹಿತ ಸದಸ್ಯತ್ವ ಪಡೆಯಲು ನಾಮನಿರ್ದೇಶನ ಮಾಡುವ ಅಧಿಕಾರ ಹೊಂದಿರುತ್ತಾರೆ.

ಈ ಗೌರವ ಫೆಲೊಶಿಪ್ ಅನ್ನು ಡಿಸೆಂಬರ್ ೨೦೨೧ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರೊ. ಜಿ. ಹೇಮಂತ್ ಕುಮಾರ್ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ಕೆಎಸ್‌ಟಿಎ ಅಧ್ಯಕ್ಷ ಪ್ರೊ. ಎಸ್.ಅಯ್ಯಪ್ಪನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 BIO-DATA

ಹೆಸರು: ಪ್ರೊ. ಜಿ. ಹೇಮಂತ್ ಕುಮಾರ್, ಎಂ.ಎಸ್ಸಿ (ಕಂಪ್ಯೂಟರ್ ಸೈನ್ಸ್), ಪಿಹೆಚ್.ಡಿ. (ಕಂಪ್ಯೂಟರ್ ಸೈನ್ಸ್)
ಉಪಕುಲಪತಿ, ಮೈಸೂರು ವಿಶ್ವವಿದ್ಯಾಲಯ
ಮುಖ್ಯಸ್ಥರು, ಸಂಯೋಜಕರು (ಆಡಳಿತ), ವಿಜ್ಞಾನ ಭವನ
ಸಂಯೋಜಕರು, ಇ-ಆಡಳಿತ & ಹೈ ಪರ್ಫಾಮೆನ್ಸ್ ಕಂಪ್ಯೂಟಿಂಗ್ (ಹೆಚ್‌ಪಿಸಿ)
ಸಂಯೋಜಕರು, ಮಾಹಿತಿ ಸಂವಹನಾ ವಿಭಾಗ (ಐಸಿಡಿ). ಮೈಸೂರು ವಿಶ್ವವಿದ್ಯಾಲ, ಮಾನಸಗಂಗೋತ್ರಿ
ಮೈಸೂರು, ಕರ್ನಾಟಕ – ೫೭೦೦೦೬

ಪ್ರಶಸ್ತಿಗಳು & ಗುರುತುಗಳು:

• ದೇಶದ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕೊಡುಗೆಗಾಗಿ, ‘ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ಫಾರ್ ಲೈಫ್‌ಟೈಮ್’ ವತಿಯಿಂದ ‘ಮಿಲ್ಲೇನಿಯಂ ಪ್ಲಾಕ್ಸ್ ಆಫ್ ಹಾನರ್.’ ಈ ಪ್ರಶಸ್ತಿಯನ್ನುಭಾರತದ ಪ್ರಧಾನ ಮಂತ್ರಿಗಳಿಂದ ಪಡೆದ ಹೆಮ್ಮೆ. (ಇದು ಭಾರತ ಸರ್ಕಾರದ ಅತ್ಯುನ್ನತ ಹಾಗೂ ಪ್ರತಿಷ್ಠಿದ ರಾಷ್ಟ್ರಮಟ್ಟದ ಪ್ರಶಸ್ತಿಯಾಗಿದೆ).
• ಸಮಾಜಕ್ಕೆ ಅನುಕೂಲವಾಗುವ ಸೇವೆಗಳಿಗಾಗಿ ರಾಜ್ಯಮಟ್ಟದಲ್ಲಿ ‘ಉಪಾಧ್ಯಾಯ ಸಮ್ಮಾನ್’ ಹಾಗೂ ಸೇವೆಗಳು ಶೈಕ್ಷಣಿಕ ಉತ್ಕೃಷ್ಟತೆ ಹಾಗೂ ಸಮಾಜ ಕ್ಷೇತ್ರದಲ್ಲಿನ ಉತ್ಕೃಷ್ಟತೆಗಾಗಿ, ಉಪಾಧ್ಯಾಯ ಮೂಡುಬೆಲ್ಲೆ ಆರ್ಟ್ ಫೌಂಡೇಷನ್ ವತಿಯಿಂದ ಪ್ರಶಸ್ತಿ.
• ಮೈಸೂರಿನ ಲಯನ್ಸ್ ರೋಟರಿ ಕ್ಲಬ್ ವತಿಯಿಂದ ಅತ್ಯುತ್ತಮ ಶಿಕ್ಷಕರಾಗಿ ‘ಶಿಕ್ಷಕರ ದಿನ’ದ ಪ್ರಶಸ್ತಿ.
• ನವ ದೆಹಲಿಯ ಸಿಇಸಿಗೆ ಆಡಳಿತ ಸದಸ್ಯರಾಗಿ ನಾಮನಿರ್ದೇಶನ.
• ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ನಂತರ ವಿವಿಧ ಯುಜಿಸಿ ಸಮಿತಿಗಳಿಗೆ ಸದಸ್ಯರಾಗಿ ಮತ್ತು ಹಾಗೂ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ವಿವಿಧ ಶೈಕ್ಷಣಿಕ ಹಾಗೂ ಸಂಶೋಧನಾ ಅಂಗಗಳಿಗೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

key words : Mysore-university-vice.chancellor-hemanth.kumar-vc-uom-fellowship