ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರಿಗೆ ‘ಜಗಜ್ಯೋತಿ ಪ್ರಶಸ್ತಿ’..

Promotion

ಮೈಸೂರು,ಮಾರ್ಚ್,12,2021(www.justkannada.in):  ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ. ಹೇಮಂತ್ ಕುಮಾರ್ ಅವರು ಜಗಜ್ಯೋತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.jk

ಶ್ರೀವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ವತಿಯಿಂದ ಶ್ರೀವನಕಲ್ಲು ಮಲ್ಲೇಶ್ವರಸ್ವಾಮಿ ಬ್ರಹ್ಮರಥೋತ್ಸವ -2021ರ ಅಂಗವಾಗಿ ಮಾರ್ಚ್ 15 ರಂದು ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ  ಆಯೋಜಿಸಲಾಗಿದೆ. ಸಮಾಜಕ್ಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆಯನ್ನ ಪರಿಗಣಿಸಿ ಪ್ರೊ. ಜಿ. ಹೇಮಂತ್ ಕುಮಾರ್ ಅವರನ್ನ ಜಗಜ್ಯೋತಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದ್ದು, ಮಾರ್ಚ್ 15 ರಂದು  ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.Mysore university-VC- Prof.G Hemanth Kumar-. Jagajyothi Award

ಇನ್ನು ಇದೇ ವೇಳೆ ವಚನ ಸಾಹಿತ್ಯ ಚಿಂತಕರು, ಸಂಶೋಧಕರಾಗಿರುವ ಡಾ. ವೀರಣ್ಣ ಬಸಪ್ಪರಾಜೂ ಅವರಿಗೆ ವನಕಲ್ಲು ಶ್ರೀ ಪ್ರಶಸ್ತಿ,  ತುಮಕೂರು ವಿವಿ ಕುಲಪತಿಗಳಾದ ಡಾ. ಸಿದ್ದೇಗೌಡರಿಗೆ ವಿಶ್ವಜ್ಯೋತಿ ಪ್ರಶಸ್ತಿ, ಮಾಜಿ ಸಭಾಪತಿ ಪುಟ್ಟಣ್ಣ ಅವರಿಗೆ ಶ್ರೀ ಬಾಲಗಂಗಾಧರನಾಥ ನಿರ್ಮಲ ಜ್ಯೋತಿ ಪ್ರಶಸ್ತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಪ್ರೊ. ವಿ.ಗಿರೀಶ್ ಚಂದ್ರ ಅವರಿಗೆ ಸಿದ್ದಯೋಗಾನಂದಶ್ರೀ ಕಾಯಕ ಜ್ಯೋತಿ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುತ್ತದೆ.

Key words: Mysore university-VC- Prof.G Hemanth Kumar-. Jagajyothi Award