ಮೈಸೂರು ವಿವಿ ಮಾನಸ ಗಂಗೋತ್ರಿ ಕ್ಯಾಂಪಸ್ ಗೆ ‘ಹದ್ದಿನ ಕಣ್ಣು’

ಮೈಸೂರು,ಆ,13,2020(www.justkannada.in): ಪ್ರತಿಷ್ಠಿತ  ಮೈಸೂರು ವಿಶ್ವ ವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಇನ್ಮುಂದೆ ನಡೆಯುವ ಗಲಾಟೆ, ಪ್ರತಿಭಟನೆ, ರ್ಯಾಗಿಂಗ್, ಕಳ್ಳತನ ಇವೆಲ್ಲದಕ್ಕೂ ಬ್ರೇಕ್ ಬೀಳಲಿದೆ. ಹೌದು, ಫ್ರೀ ಕಾಶ್ಮೀರ ಪ್ರಕರಣ ಮತ್ತು ಇತರೆ ಗಲಾಟೆಯಿಂದ ಎಚ್ಚೆತ್ತುಕೊಂಡಿರುವ ಮೈಸೂರು ವಿವಿ 700ಕ್ಕೂ ಹೆಚ್ಚು ಸರ್ವೈಲೆನ್ಸ್ ಕ್ಯಾಮರಾ ಅಳವಡಿಕೆ ಮಾಡಿದೆ.mysore-university-Crawford-hall-closed-for-10-days-due-to-corona-positive-found-VC-prof.hemanth.kumar

ಈ ಕುರಿತು ಮಾಹಿತಿ ನೀಡಿರುವ ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಈಗಾಗಲೇ ವೈ-ಫೈ ಮೂಲಕ ಗಮನ ಸೆಳೆದಿದ್ದ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಮೂರುವರೆ ಕೋಟಿ.ರೂ ವೆಚ್ಚದಲ್ಲಿ ಹೈಫ್ರೋಫೆಷನ್ ಕ್ಯಾಂಪಸ್ ಸಿದ್ದವಾಗಿದೆ. ಮೈಸೂರು ವಿವಿಯಾದ್ಯಂತ‌‌ 700ಕ್ಕೂ ಹೆಚ್ಚು ಸರ್ವೈಲೆನ್ಸ್ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು,  15 ದಿನಗಳಲ್ಲಿ ಈ ಕ್ಯಾಮರಾಗಳು ಚಾಲನೆಗೊಳ್ಳಲಿವೆ. ಈ ಮೂಲಕ  ಅನವಶ್ಯಕ, ಗಲಾಟೆ, ಪ್ರತಿಭಟನೆ ಕಟ್ಟಿ ಹಾಕಲು  ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.mysore-university-surveillance-camera-campus

ಸರ್ವೈಲೆನ್ಸ್ ಕ್ಯಾಮರಾ ಅಳವಡಿಕೆ ಹಿನ್ನೆಲೆ ಮೈಸೂರು ವಿವಿ ಕ್ಯಾಂಪಸ್ ನಲ್ಲಿ ಇನ್ಮುಂದೆ ಹೆಜ್ಜೆ-ಹೆಜ್ಜೆಗೂ ಕಣ್ಗಾವಲು ಇರಲಿದ್ದು, ಪ್ರತಿಭಟನೆ, ಗಲಾಟೆಯ ಇಂಚಿಂಚು ದೃಶ್ಯವೂ ಸರ್ವೈಲೆನ್ಸ್ ಕ್ಯಾಮರಾದಲ್ಲಿ ಸೆರೆಯಾಗತ್ತದೆ.  ಕ್ಯಾಂಪಸ್ ಎಂಟ್ರಿ’ ಎಕ್ಸಿಟ್ ಪಾಯಿಂಟ್ ‌ನಲ್ಲು ವಾಹನಗಳ ಸಂಪೂರ್ಣ ವಿವರವೂ ರೆಕಾರ್ಡ್ ಆಗಲಿದ್ದು, ಯಾರಾದರೂ ಮೈಮರೆತು ರ್ಯಾಗಿಂಗ್, ಕಳ್ಳತನ ಇನ್ನಿತರ ತಪ್ಪು ಮಾಡಿದ್ರೆ ಇಂಚಿಂಚು ಸರ್ವೈಲೆನ್ಸ್ ಕ್ಯಾಮರಾದಲ್ಲಿ  ಸೆರೆಯಾಗಲಿದೆ. ಹೀಗಾಗಿ  ವಿದ್ಯಾರ್ಥಿಗಳೇ ಇನ್ಮುಂದೆ ಕ್ಯಾಂಪಸ್ ಗೆ ಬಂದ್ರೆ ಚೇಷ್ಟೆ ಬಿಡಿ.  ಜವಾಬ್ದಾರಿಯ ದತ್ತ ಗಮನ ಕೊಡಿ ಎಂದು ಫ್ರೋ.ಜಿ.ಹೇಮಂತ್ ಕುಮಾರ್ ಸೂಚನೆ ನೀಡಿದ್ದಾರೆ.

summary..

INTELLIGENT VIDEO SURVEILLANCE SYSTEM- Centralised monitoring solution with total 720 4mp ip camera’s are getting installed across campus which covers department corridors, campus roads , Entrance and exit gates with vechile number plates capturing options.
DATA CENTRE
2100sqft of high availability Data center is under progress to cater centralised control and monitoring of entire campus at Dos in computer science building

Key words: mysore university- Surveillance camera- Campus