ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದ ಪ್ರಾಧ್ಯಾಪಕ: ಪ್ರಕರಣ ಮುಕ್ತಾಯಗೊಳಿಸಿದ ಮೈಸೂರು ವಿವಿ..

Promotion

ಮೈಸೂರು,ಜೂ, 17,2019(www.justkannada.in):  ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದ ಮೈಸೂರು ವಿವಿ ಪ್ರಾಧ್ಯಾಪಕ ಡಾ.ದಯಾನಂದ ಮಾನೆ ವಿರುದ್ದದ ಪ್ರಕರಣವನ್ನ ಮೈಸೂರು ವಿವಿ ಮುಕ್ತಾಯಗೊಳಿಸಿದೆ.

ವಿವಿಯ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ದಯಾನಂದ ಮಾನೆ  ವಿರುದ್ಧ  ಲೈಂಗಿಕ ಕಿರುಕುಳದ ದೂರು ದಾಖಲಾಗಿತ್ತು. ದೂರಿನ ಮೇಲೆ ವಿಶ್ವವಿದ್ಯಾಲಯದ ಆಂತರಿಕ ದೂರು ಸಮಿತಿಯು ವಿಚಾರಣೆ ನಡೆಸಿತ್ತು. ಇವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ವಿವಿ ದೂರು ಸಮಿತಿಯು ಸಲ್ಲಿಸಿದ ವರದಿಯನ್ನು ಸಿಂಡಿಕೇಟ್ ಸಭೆ ಕೂಲಂಕುಷವಾಗಿ  ಪರಿಶೀಲಿಸಿತ್ತು.

ದಯಾನಂದ ಮಾನೆ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ದೂರು ಸಮಿತಿ ಸಲ್ಲಿಸಿದ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸಿಂಡಿಕೇಟ್ ಸಭೆ ಸದರಿ ಪ್ರಾಧ್ಯಾಪಕರ ವಿರುದ್ದ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ಆರೋಪಗಳು ಸಾಭೀತಾಗದೆ ಇರುವುದರಿಂದ ಈ ಪ್ರಕರಣವನ್ನ ಇಲ್ಲಿಗೆ ಮುಕ್ತಾಯಗೊಳಿಸಲು ತೀರ್ಮಾನಿಸಿತು.

Key words: Mysore University- professor- Dr Dayananda Mane- clean cheat-Sexual harassment