ವಿಶ್ವವಿದ್ಯಾಲಯ ಕುಲಪತಿಗಳ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳೇನು?

kannada t-shirts

ಮೈಸೂರು.ಮಾರ್ಚ್, 25,2022(www.justkannada.in): ಮೈಸೂರು ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ನಡೆದ ಮೂರು ದಿನಗಳ 96ನೇ ವಿಶ್ವವಿದ್ಯಾಲಯ ಕುಲಪತಿಗಳ ಸಮ್ಮೇಳನದ ಶುಕ್ರವಾರ ಮುಕ್ತಾಯಗೊಂಡಿದ್ದು, ಕೈಗೊಂಡ ನಿರ್ಣಯಗಳು ಈ ಕೆಳಕಂಡಂತೆ ಇದೆ.

  1. ಭಾರತೀಯ ವಿಶ್ವವಿದ್ಯಾನಿಲಯಗಳ ಎಲ್ಲಾ ಕುಲಪತಿಗಳು ‘ಸುಸ್ಥಿರ ಅಭಿವೃದ್ಧಿ ಗುರಿ’ಗೆ (ಎಸ್‌ಡಿಜಿ) ಒತ್ತು ನೀಡಬೇಕು. ಶಿಕ್ಷಣ, ಸಂಶೋಧನೆ, ಆವಿಷ್ಕಾರ ಸೇರಿದಂತೆ ಒಟ್ಟು 17 ಗುರಿಗಳನ್ನು ಸಾಧಿಸಲು ಕ್ರಮಕೈಗೊಳ್ಳಬೇಕು,
  2. ವಿಶ್ವವಿದ್ಯಾನಿಲಯಗಳು ಪರಿಸರ ಸ್ನೇಹಿ ವಾತಾವರಣವನ್ನು ಸೃಷ್ಟಿಸಬೇಕು. ಸೋಲಾರ್ ಹಾಗೂ ಎಲೆಕ್ಟ್ರಿಕಲ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಪರಿಸರಕ್ಕೆ ಪೂರಕ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು.
  3. ವಿಶ್ವವಿದ್ಯಾನಿಲಯಗಳು ಲಿಂಗ ಸಮಾನತೆಗೆ ಪೂರಕವಾಗಿ ಕೆಲಸ ಮಾಡಬೇಕು. ಮಹಿಳೆಯರ ಸುರಕ್ಷತೆಗೆ ಪ್ರಾಮುಖ್ಯತೆ ನೀಡಬೇಕು.
  4. ಭಾರತ ಸರ್ಕಾರದ ಆತ್ಮನಿರ್ಭರ ಸಂಕಲ್ಪವನ್ನು ವಿಶ್ವವಿದ್ಯಾನಿಲಯಗಳು ಬಲಪಡಿಸಬೇಕು. ಆ ಮೂಲಕ ಸಂಶೋಧನೆ ಮತ್ತು ನಾವೀನ್ಯತೆಯನ್ನು ಅಳವಡಿಕೊಂಡರೆ 2035 ರ ವೇಳೆಗೆ ಆರ್ಥಿಕತೆ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ.
  5. ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘ ಮೌಲ್ಯಯುತ ಸಂಗತಿಗಳನ್ನು ಪಟ್ಟಿ ಮಾಡಿದ್ದು, ಉನ್ನತ ಶಿಕ್ಷಣದಲ್ಲಿ ಇದನ್ನು ಅಳವಡಿಸುವ ಕೆಲಸ ಆಗಬೇಕು. ಕ್ರಿಯಾ ಯೋಜನೆ ಸಿದ್ಧಗೊಳ್ಳಬೇಕು.
  6. ವಿಶ್ವವಿದ್ಯಾನಿಲಯಗಳು ಹಸಿರು ವಲಯಗಳಾಗಬೇಕು. ಸ್ಮಾರ್ಟ್ ಕ್ಯಾಂಪಸ್, ತಂತ್ರಜ್ಞಾನಗಳು, ಉದ್ಯಮ ಸ್ನೇಹಿ ಆಗಬೇಕು.
  7. ಎಲ್ಲಾ ವಿವಿಗಳ ಕುಲಪತಿಗಳು ನೈಜ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವ ಕೆಲಸ ಮಾಡಬೇಕು. ಜಾಗತಿಕ ಸಮುದಾಯವನ್ನು ಹೆಚ್ಚು ಸಮೃದ್ಧ, ಶಾಂತಿಯುತ, ಸಂತೋಷ, ಆರೋಗ್ಯಕರ ಮತ್ತು ಸುಸ್ಥಿರವಾಗಿಡಲು ಪ್ರಯತ್ನಿಸಬೇಕು.
  8. ಪ್ರತಿ ವಿಶ್ವವಿದ್ಯಾನಿಲಯವು ಎಸ್‌ ಡಿಜಿ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸಬೇಕು. ಭಾರತದ ವಿವಿಗಳ ಸಂಪರ್ಕದ ಮೂಲಕ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಬೇಕು.
  9. ಎಲ್ಲಾ ವಿಶ್ವವಿದ್ಯಾನಿಲಯಗಳು ಪ್ರತಿ ಎಸ್‌ ಡಿಜಿಗೆ ಸಂಬಂಧಿಸಿದಂತೆ ತಮ್ಮ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬೇಕು, ಮೌಲ್ಯಮಾಪನ ಮಾಡಬೇಕು ಮತ್ತು ವರದಿ ಹೊರತರಬೇಕು.

Key words: mysore university- Conference-decision

ENGLISH SUMMARY..

Resolutions made at the University Vice-Chancellors’ Conference
Mysuru, March 25, 2022 (www.justkannada.in): The 96th University Vice-Chancellors’ Conference was held for the first time in the University of Mysore, that concluded today. The following resolutions were made at the conference:
1. All the Vice-Chancellors’ of Indian Universities should give more focus on achieving the Sustainable Development Goals. Measures should be taken to achieve the 17 goals including education, research and inventions.
2. The universities should make efforts to create environmental-friendly atmosphere. More preference should be given for solar and electrical vehicle usage. More environmental conservation related programs should be implemented.
3. The Universities should work to bring gender equality. Should give prominence for safety of women.
4. The Universities should strengthen the objectives of the Atmanirbhar program of Govt. of India. Through adoption of research and innovations economical transformation can be seen by the year 2035.
5. The Association of Indian Universities has prepared a list of points which should be adopted in the higher education system. Should prepare action plan.
6. The Universities should be green zones. Should become smart campuses, technology and entrepreneur-friendly.
7. All the Vice-Chancellors of all the Universities should pledge to provide qualitative education to the students. Efforts should be made to make the global community more prosperous, harmonious, happy, healthy and sustainable.
8. Every University should make efforts to realize the SDGs. Should exchange good practices through Indian Universities.
9. Every University should monitor the progress towards achieving every SDG, evaluate and publish report.

website developers in mysore