ಕಳ್ಳತನದಲ್ಲಿ ಪಾಲು ಕೇಳಿದ್ದಕ್ಕೆ ಸ್ವಂತ ಸಹೋದರ ಮತ್ತು ಸಂಬಂಧಿಯ ಹತ್ಯೆ…

Promotion

ಮೈಸೂರು,ಸೆಪ್ಟಂಬರ್,15,2020(www.justkannada.in): ಕಳ್ಳತನದಲ್ಲಿ ಪಾಲು ಕೇಳಿದ್ಧಕ್ಕೆ ಸ್ವಂತ ಸಹೋದರ ಹಾಗೂ ಸಂಬಂಧಿಯನ್ನೇ ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.jk-logo-justkannada-logo

ರಾಜು(30), ರಾಚಯ್ಯ(30) ಕೊಲೆಯಾದವರು. ಮುನಿಯ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದು ಇದೀಗ ಮುನಿಯಾನನ್ನ ಹುಣಸೂರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಇಬ್ಬರು ಹಾಗೂ ಆರೋಪಿ ಮುನಿಯಾ ಮೂವರು ಸೇರಿ ಪಂಪ್‌ಸೆಟ್ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.

ಈ ನಡುವೆ ಕಳ್ಳತನ ಮಾಡಿದ ನಂತರ ಕಳ್ಳತನದ ಪಾಲು ಕೇಳಿದ್ದಕ್ಕೆ ಸಹೋದರರಾದ ಮುನಿಯಾ ಮತ್ತು ರಾಜು ಇಬ್ಬರು ಸೇರಿ ರಾಚಯ್ಯನನ್ನ ಹತ್ಯೆ ಮಾಡಿದ್ದರು. ಆಗಸ್ಟ್ 28ರಂದು ರಾಚಯ್ಯನ ಕೊಲೆಯಾಗಿತ್ತು. ರಾಚಯ್ಯನನ್ನ ಕೊಲೆ‌ ಮಾಡಿ ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಬಳಿ ಶವ ಸುಟ್ಟು ಹಾಕಿದ್ದರು.

ಇದಾದ‌ ಕೆಲ ದಿನಗಳ ನಂತರ ರಾಜುವನ್ನು ಸ್ವಂತ ಸಹೋದರ ಮುನಿಯಾ ಎಂಬುವವನೇ ಹತ್ಯೆ ಮಾಡಿದ್ದಾನೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳಿನಲ್ಲಿ ಈ ಕೊಲೆ ನಡೆದಿದೆ.

ಕಳ್ಳತನ ನಡೆಸುತ್ತಿದ್ದ ಮುನಿಯಾ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಊರಿಗೆ ಹೋಗುವುದು ಬೇಡ ಎಂದು ಸಹೋದರ ರಾಜುವಿನ ಬಳಿ ಹೇಳಿಕೊಂಡಿದ್ದನು. ಆದರೆ ಇದಕ್ಕೆ ಒಪ್ಪದ ರಾಜು ಒಬ್ಬನೇ ಊರಿಗೆ ಹೋಗಲು ಮುಂದಾಗಿದ್ದ. ಇದರಿಂದ ಆಕ್ರೋಶಗೊಂಡ ಮುನಿಯಾ ರಾಜು  ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು.

ಕೊಲೆ ಮಾಡಿದ ನಂತರ ತಲೆಮರಿಸಿಕೊಂಡಿದ್ದ ಮುನಿಯಾನನ್ನ ಇದೀಗ ಹುಣಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

Key words: mysore-thief-murder- relation-brother-arrest