ಪ್ರಾಧ್ಯಾಪಕರನ್ನ ನೇಮಕ ಮಾಡುವಂತೆ ಒತ್ತಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು…

ಮೈಸೂರು,ಜು,24,2019(www.justkannada.in): ಪ್ರಾಧ್ಯಾಪಕರನ್ನ ನೇಮಕ ಮಾಡುವಂತೆ ಒತ್ತಾಯಿಸಿ ಮೈಸೂರಿನ ಯುವರಾಜ ಕಾಲೇಜು  ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.

ಯುವರಾಜ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಧರಣಿ ನಡೆಸಿದ್ದಾರೆ. ಕಾಲೇಜು ಆಂರಂಭವಾಗಿ ಒಂದು ತಿಂಗಳು ಕಳೆದಿದ್ದರೂ ಇನ್ನೂ ಪ್ರಾದ್ಯಾಪಕರು ಸರಿಯಾಗ ತರಗತಿ ತೆಗೆದುಕೊಳ್ಳತ್ತಿಲ್ಲ. ಇದರಿಂದ ವಿದ್ಯಾರ್ಥಿ ಭವಿಷ್ಯ ಅಂತ್ರವಾಗಿದೆ. ಪ್ರಾಧ್ಯಾಪಕರ ಕೊರತೆಯಿಂದ ಈ ತೊಂದರೆ ಉಂಟಾಗಿದೆ. ಕನಿಷ್ಟ ಅತಿಥಿ ಉಪನ್ಯಾಸಕರನ್ನೂ ಕೂಡ ನೇಮಕ ಮಾಡಿಲ್ಲ. ಪ್ರತಿದಿನ ಕಾಲೇಜಿಗೆ ಬಂದು ತರಗತಿಗಳಿ ಇಲ್ಲದೆ ವಾಪಸ್ ತೆರಳುವಂತಾಗಿದೆ. ನಿಧಾನವಾಗಿ ಶಿಕ್ಷಕರನ್ನ ನೇಮಕ ಮಾಡಿದರೆ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ. ಕೂಡಲೆ ಪ್ರಾಧ್ಯಾಪರನ್ನ ನೇಮಕ ಮಾಡಬೇಂದು ಒತ್ತಾಯಿಸಿದ ವಿದ್ಯಾರ್ಥಿಗಳು. ಕಾಲೇಜು ಆಡಳಿತ ಮಂಡಳಿ ಕೂಡ ಈ ಬಗ್ಗೆ ತಲೆಕೆಡಿಕೊಂಡಿಲ್ಲ. ಈ‌ ಕೂಡಲೆ ಪ್ರಾದ್ಯಾಪಕರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಇನ್ನು ಯುವರಾಜು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲರಾದ ರುದ್ರಯ್ಯ ವಿದ್ಯಾರ್ಥಿಗಳ ಮನವೊಲಿಸಲು ಮುಂದಾದರು.  ನಾಳೆ ಸಂಜೆಯೊಳಗೆ ಉಪನ್ಯಾಸಕರ ನೇಮಕ ಆದೇಶ ತರಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಸದ್ಯ 15 ಡಿಪಾರ್ಟ್ಮೆಂಟ್ ಗಳಿಗೆ ಆದೇಶ ಪ್ರತಿ ತಂದಿದ್ದೇನೆ. ವಿಸಿಗಳ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ನಾವು ಶ್ರಮಿಸುತ್ತಿದ್ದೇವೆ. ಇಂದು ಸಂಜೆಯೊಳಗೆ ಎಲ್ಲಾ ವಿಭಾಗಗಳಿಗೂ ಉಪನ್ಯಾಸಕರ ನೇಮಕ‌ ಪತ್ರ ತರಲಾಗುವುದು. ವಿದ್ಯಾರ್ಥಿಗಳು ಆಂತಕಪಡುವ ಅಗತ್ಯ ಇಲ್ಲಾ. ಖಾಯಂ ಉಪನ್ಯಾಸಕರು ನೇಮಕವಾದರೆ ಈ ಸಮಸ್ಯೆ ಉದ್ಘವಿಸುವುದಿಲ್ಲ ಎಂದು ಯುವರಾಜು ಕಾಲೇಜಿನ  ಪ್ರಾಂಶುಪಾಲ ರುದ್ರಯ್ಯ ಹೇಳಿದರು.

Key words: mysore-Students –protest- demanding – appointment – professor