ಧಾರವಾಡದ ಐಐಐಟಿ ದೇಶದಲ್ಲಿ ನಂಬರ್ ಒನ್ ಆಗಲು ಎಲ್ಲರೂ ಶ್ರಮ ವಹಿಸಿ ಓದಿ- ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಕರೆ.

ಧಾರವಾಡ,ಸೆಪ್ಟಂಬರ್,26,2022(www.justkannda.in): ಧಾರವಾಡದ ಐಐಐಟಿ ದೇಶದಲ್ಲಿ ನಂಬರ್ ಒನ್ ಆಗಲು ಎಲ್ಲರೂ ಶ್ರಮ ವಹಿಸಿ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಇಂದು  ಧಾರವಾಡದಲ್ಲಿ ಐಐಐಟಿ ಕಟ್ಟಡವನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ,  ಧಾರವಾಡದ ಐಐಐಟಿ ದೇಶದಲ್ಲಿ ನಂಬರ್ ಒನ್ ಆಗಬೇಕು.  ಎಲ್ಲರೂ ಶ್ರಮವಹಿಸಿ ಓದಬೇಕು. ಈ ಜಮೀನಿನಲ್ಲಿ ಧಾರವಾಡ ಜಿಲ್ಲಾ ರೈತರು ಬೆಳೆ ಬೆಳೆಯುತ್ತಿದ್ದರು. ಆದರೆ ಇವತ್ತು ಅದೇ ಜಮೀನಿನಲ್ಲಿ ಜ್ಞಾನ ಬೆಳೆಯಲಾಗುತ್ತಿದೆ.  ಭೂಮಿ ನೀಡಿದ ರೈತರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: IIIT -Dharwad – CM Basavaraj Bommai – students.