ಕೊರೋನಾ ಇಲ್ಲದಿದ್ರೂ ಮೃತದೇಹದತ್ತ ಸುಳಿಯದ ಸಂಬಂಧಿಕರು : ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ…

ಮೈಸೂರು,ಮೇ,8,2021( www.justkannada.in): ಕೊರೊನಾ ಇಲ್ಲದಿದ್ದರೂ ಮೃತದೇಹದತ್ತ ಸುಳಿಯದ ರಕ್ತಸಂಭಂಧಿಗಳು, ಸ್ನೇಹಿತರು,  ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ರಜ಼ಾ ನೌಜವಾನ್ ವೆಲ್ ಫೇರ್ ಅಸೋಸೊಯೇಷನ್ ಎಂಬ ಸಂಘಟನೆ. ಇದು ನಡೆದಿರುವುದು ಮೈಸೂರಿನಲ್ಲಿ.jk

ಮೈಸೂರಿನ ಗೌಸಿಯಾನಗರದ ನಿವಾಸಿ ಸೀನಾ(25) ಎಂಬುವವರು  ಸಹಜ ಖಾಯಿಲೆಯಿಂದ ಮೃತಪಟ್ಟಿದ್ದರು. ಆದರೆ ಕೋವಿಡ್ ಎರಡನೇ ಅಲೆ ಎಫೆಕ್ಟ್ ನಿಂದಾಗಿ ಕೊರೊನಾ ಇಲ್ಲದಿದ್ದರೂ ಸಹ ಸಂಬಂಧಿಕರಾಗಲಿ ಸ್ನೇಹಿತರಾಗಿಲಿ  ಮೃತದೇಹದತ್ತ ಸುಳಿಯಲಿಲ್ಲ. ಅಂತ್ಯಕ್ರಿಯೆ ನಡೆಸಲು ಮುಂದಾಗಲಿಲ್ಲ. ಪಕ್ಕದ ಮನೆಯಲ್ಲೇ ಸಹೋದರನಿದ್ದರೂ ಸಹ ಕೊರೊನಾಗೆ ಹೆದರಿ ಹತ್ತಿರ ಬರಲಿಲ್ಲ.

ಈ ಬಗ್ಗೆ ಮಾಹಿತಿ ಅರಿತ ರಜಾ಼ ನೌಜವಾನ್ ವೆಲ್ ಫೇರ್ ಅಸೋಸಿಯೇಷನ್  ಎಂಬ ಸಂಘಟನೆ  ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದೆ.

ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದ ಸೀನ, ಸಹಜ ಖಾಯಿಲೆಯಿಂದ ನರಳಿ ತಮ್ಮ‌ ಮನೆಯಲ್ಲೇ ಮೃತಪಟ್ಟಿದ್ದನು. ಈ ವಿಷಯ ತಿಳಿದ ರಜ಼ಾ ನೌಜವಾನ್ ವೆಲ್ ಫೇರ್ ಅಸೋಸೊಯೇಷನ್ ಆತನ ಅಂತ್ಯಕ್ರಿಯೆಗೆ ಮುಂದಾಗಿ ಸತ್ಯಾನಗರದ ರುದ್ರಭೂಮಿಯಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಿದೆ.mysore-relatives-death-person-funeral-humanitarian-organization

ಈ ಮೂಲಕ ಕೊರೋನಾ ಭೀತಿಯ ನಡುವೆ ನಾವಿದ್ದೇವೆ ಎಂಬ ಅಭಯವನ್ನ ನೀಡಿದ್ದು, ರಜ಼ಾ ನೌಜವಾನ್ ವೆಲ್ ಫೇರ್ ಅಸೋಸಿಯೇಷನ್ ಸಂಘಟನೆಯ ಮಾನವೀಯತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Key words: mysore-Relatives –death-person-  funeral – humanitarian -organization.