ಕಾಶಿಯಾತ್ರೆ ಮಾಡಿ ಬಂದವರಿಂದ ಹರಡಿದ ಸೋಂಕು : ಗ್ರಾಮದ 185 ಮಂದಿಗೆ ಪಾಸಿಟಿವ್…

ಮೈಸೂರು,ಮೇ 8,2021(www.justkannada.in):  ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿದ್ದು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೊಡಗಹಳ್ಳಿ ಗ್ರಾಮ ಇದೀಗ ಕೊರೊನಾ ಕೇಂದ್ರವಾಗಿ ಮಾರ್ಪಟ್ಟಿದೆ.jk

ಹೌದು ಕೊಡಗಹಳ್ಳಿ ಗ್ರಾಮದ  185 ಮಂದಿಗೆ ಕೊರೋನಾ ಸೋಂಕು ತಗುಲಿದೆ.  ಕಾಶಿಯಾತ್ರೆ ಮಾಡಿ ಬಂದವರಿಂದ ಕೊರೋನಾ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಕಾಶಿಗೆ 20 ಮಂದಿ ಹೋಗಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದ 800 ಮಂದಿ ಕೊರೋನಾ ಟೆಸ್ಟ್ ಕೊಟ್ಟಿದ್ದು ಈ ವೇಳೆ 185 ಮಂದಿಗೆ ಪಾಸಿಟಿವ ಕಂಡು ಬಂದಿದೆ.

ಗ್ರಾಮದ ಮಹದೇವಪ್ಪ  ಎಂಬುವವರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮಕ್ಕಳು ಇಲ್ಲದೆ ಸಂಬಂಧಿಕರೂ ಇಲ್ಲದೆ ಮೃತದೇಹ ಅನಾಥವಾಗಿತ್ತು. ಗ್ರಾಮದ ಜನರು ಕೂಡ ಶವ ಮುಟ್ಟದೆ ಭಯದಿಂದ ದೂರ ಉಳಿದಿದ್ದರು. ಈ ನಡುವೆ ಎರಡು ದಿನಗಳ ನಂತರ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ.mysore-corona-positive-185-kodagahalli-village

ಕೊರೊನಾದಿಂದಾಗಿ ಹೆಣ ಎತ್ತಲೂ ಜನರಿಲ್ಲದಂತಾದ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣ‌ವಾಗಿದೆ. ಇನ್ನು ಗ್ರಾಮಕ್ಕೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭೇಟಿ, ಪರಿಶೀಲನೆ ನಡೆಸಿದ್ದು ಇದೀಗ ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ.

Key words: mysore-corona Positive – 185 –kodagahalli- village.