ಮೈಸೂರಿನಲ್ಲಿ ಹೆಲ್ಮೆಟ್ ಹಾಕದ  ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಪೊಲೀಸರಿಂದ ಅರಿವು…

Promotion

ಮೈಸೂರು,ಫೆ,29,2020(www.justkannada.in): ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಮೈಸೂರು ಪೊಲೀಸರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು, ಬೈಕ್​ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಹೆಲ್ಮೆಟ್​​ ಧರಿಸುವಂತೆ ಮನವಿ ಮಾಡಿದ್ದಾರೆ.

ಮೈಸೂರಿ‌ನ ಪಾಠ ಶಾಲಾ ಸಿಗ್ನಲ್ ಬಳಿ ಹೆಲ್ಮೆಟ್ ಬಗ್ಗೆ ಕೆ.ಆರ್.ಠಾಣೆ ಪೊಲೀಸರು ವಿನೂತನ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಎಎಸ್ ಐ ಗುರುಸ್ವಾಮಿ ಅವರು ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಅರಿವು ಮೂಡಿಸಲು ಮುಂದಾದರು.

ಹೆಲ್ಮೆಟ್ ಹಾಕುವಂತೆ ಗುಲಾಬಿ ನೀಡಿ ಎಎಸ್‌ಐ ಗುರುಸ್ವಾಮಿ ಮನವಿ ಮಾಡಿದರು. ಎಎಸ್ ಐ ಗುರುಸ್ವಾಮಿ ಅವರಿಗೆ ಸಿಬ್ಬಂದಿಗಳಾದ ಶಿವಕುಮಾರ್, ಸಂತೋಷ ಸಾಥ್ ನೀಡಿದರು. ಗುರುಸ್ವಾಮಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Key words: Mysore- Police -give –redrose- helmet