ಸಿದ್ದರಾಮಯ್ಯನವರೇ, ಹಿಟ್ ಆ್ಯಂಡ್ ರನ್ ನಿಮಗೆ ಶೋಭೆ ತರುವುದಿಲ್ಲ : ಬಿಜೆಪಿ ಶಾಸಕ ಬಿ. ಹರ್ಷವರ್ಧನ್

Promotion

 

ನಂಜನಗೂಡು, ನ.11, 2021 (www.justkannada.in news) : ಮಾಜಿ ಮುಖ್ಯಮಂತ್ರಿಯಾಗಿ ನೀವು ಹಗುರವಾಗಿ ಮಾತನಾಡಬೇಡಿ. ನಿಮ್ಮಲ್ಲಿ ಮಾಹಿತಿಯ ಕೊರತೆ ಇದ್ದರೆ ಬೇರೆಯವರಿಂದ ಮಾಹಿತಿ ಪಡೆದುಕೊಳ್ಳಿ. ಅದನ್ನು ಬಿಟ್ಟು ಹಿಟ್ ಆಂಡ್ ರನ್ ರೀತಿಯ ವರ್ತನೆ ನಿಮಗೆ ಶೋಭೆ ತರುವುದಿಲ್ಲ ಎಂದು ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ನಂಜನಗೂಡು ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳೆಲ್ಲ ನಾನು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಿರುವ ದುಡ್ಡಿನದ್ದು ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ಹರ್ಷವರ್ಧನ್ ಆಶ್ಚರ್ಯ ವ್ಯಕ್ತಪಡಿಸಿ, ನಿಮ್ಮ ಸರಕಾರ ಇದ್ದಾಗ ಕೊಟ್ಟ ಅನುದಾನವನ್ನು ಈಗಲೂ ಬಳಸಲು ಸಾಧ್ಯವಿದೆಯೇ? ಶಾಸಕರಾಗಿರುವ ನಿಮ್ಮ ಮಗನೂ ನೀವು ಕೊಟ್ಟ ಅನುದಾನದ ಕೆಲಸವನ್ನೇ ಈಗಲೂ ಮಾಡಿಸುತ್ತಿದ್ದಾರಾ? ನಮ್ಮಂತ ಯುವ, ಉತ್ಸಾಹಿ ಶಾಸಕರಿಗೆ ಮಾರ್ಗದರ್ಶನ ಮಾಡುವ ಬದಲು ಇಂತಹ ತೀರಾ ಕೀಳು ಮಟ್ಟದ ಹೇಳಿಕೆಗಳಿಂದ ನಿಮ್ಮ ಗೌರವಕ್ಕೂ ದಕ್ಕೆ ತಂದುಕೊಳ್ಳಬೇಡಿ, ಜನರನ್ನೂ ದಾರಿ ತಪ್ಪಿಸಬೇಡಿ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರು ಅವರು ಹೇಳಿರುವುದಿಷ್ಟು…

ಹೊಸದಾಗಿ ಆಯ್ಕೆಯಾಗಿರುವ ಶಾಸಕರೆಲ್ಲ ದುಡ್ಡು ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ನೀವು ಮಾತನಾಡಿದ್ದೀರಿ. ಈ ಮಾತು ನಿಮ್ಮ ಮಗನಿಗೂ ಅನ್ವಯಿಸುತ್ತಾ ಎಂದು ಪ್ರಶ್ನಿಸಿರುವ ಅವರು, ನಾವು ಯುವ ಶಾಸಕರು ಸಮಾಜ ಸೇವೆಯ ಉದ್ದೇಶದಿಂದ ರಾಜಕೀಯಕ್ಕೆ ಬಂದವರು. ನಮ್ಮನ್ನು ಪ್ರೋತ್ಸಾಹಿಸಿ ಒಳ್ಳೆಯ ಮಾತುಗಳನ್ನಾಡಿ ಕೆಲಸಕ್ಕೆ ಮಾರ್ಗದರ್ಶನ ನೀಡಿ. ಅದನ್ನು ಬಿಟ್ಟು ಆಧಾರ ರಹಿತ ಹೇಳಿಕೆಗಳನ್ನು ಕೊಡಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಹರ್ಷವರ್ಧನ್ ಮನವಿ ಮಾಡಿದ್ದಾರೆ.

Cancellation-Nanjangud jatra jubilee-Collector-SP -decision-correct-Legislator-Harshavardhan

ನಾನು ಮುಂದಿನ ಚುನಾವಣೆಗೆ ಹೋಗುವ 6 ತಿಂಗಳ ಮೊದಲು, ನನ್ನ ಅವಧಿಯಲ್ಲಿ ಎಷ್ಟು ಹಣ ತಂದಿದ್ದೇನೆ? ಯಾವ ಇಲಾಖೆಯಿಂದ ತಂದಿದ್ದೇನೆ? ಎಲ್ಲಿ ಖರ್ಚು ಮಾಡಿದ್ದೇನೆ ಎನ್ನುವ ಎಲ್ಲವುಗಳ ಕುರಿತು ಶ್ವೇತ ಪತ್ರ ತಂದೇ ಜನರ ಮುಂದೆ ಹೋಗುತ್ತೇನೆ. ಸುಮ್ಮನೇ ಮತ ಕೇಳುವುದಿಲ್ಲ .

ನಂಜನಗೂಡು ಕಲೆಕ್ಷನ್ ಸೆಂಟರ್ ಎಂದು ಹೇಳಿದ್ದೀರಿ. ನಿಮ್ಮ ಸರಕಾರವಿರುವಾಗ ಮೈಸೂರಿನಲ್ಲಿ ಎಲ್ಲಿ ಕಲೆಕ್ಷನ್ ಸೆಂಟರ್ ಮಾಡಿಕೊಂಡಿದ್ರಿ ಎನ್ನುವುದು ನಮಗೆ ಗೊತ್ತಿರುವ ಸಂಗತಿ ಎಂದು ಶಾಸಕ ಹರ್ಷವರ್ಧನ್ ಕಾಲೆಳೆದಿದ್ದಾರೆ.

key words : Mysore-nanjangudu-mla-harsha.vardhan-bjp