ಶಾಸಕ‌ ತನ್ವೀರ್ ಸೇಠ್ ಕೊಲೆ ಯತ್ನ ಕೇಸ್: ಇಂದು ಆರೋಪಿ ಗುರುತು ಪತ್ತೆ ಪರೇಡ್ ಹಿನ್ನೆಲೆ: ಬಿಗಿ ಪೊಲೀಸ್ ಬಂದೋಬಸ್ತ್…

Promotion

ಮೈಸೂರು,ಜ,9,2020(www.justkannada.in):  ಶಾಸಕ‌ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಆರೋಪಿ ಗುರುತು ಪತ್ತೆ ಪರೇಡ್  ನಡೆಸಲಿದ್ದಾರೆ.

ಆರೋಪಿ ಗುರುತು ಪತ್ತೆ ಪರೇಡ್  ಹಿನ್ನೆಲೆ ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹದ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ನಡುವೆ ಕಾರಾಗೃಹ ಬಳಿ ತನ್ವೀರ್ ಸೇಠ್ ಬೆಂಬಲಿಗರು ಜಮಾಯಿಸಿದ್ದು, ಪೊಲೀಸರು ಪ್ರತ್ಯೇಕದರ್ಶಿಗಳ ಮೂಲಕ ಆರೋಪಿ ಗುರುತು ಖಚಿತ ಪಡಿಸಲಿದ್ದಾರೆ.

ಶಾಸಕ ತನ್ವೀರ್ ಸೇಠ್ ಮೈಸೂರಿನಲ್ಲಿ ಚಿಕಿತ್ಸೆ ಪಡೆದ ಬಳಿಕ ವಿದೇಶಕ್ಕೆ ತೆರಳಿದ್ದರು. ದುಬೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶಾಸಕ ತನ್ವೀರ್ ಸೇಠ್ ನಿನ್ನೆ ವಿದೇಶದಿಂದ ಭಾರತಕ್ಕೆ ಆಗಮಿಸಿದ್ದರು.

ಹತ್ತು ಪ್ರತ್ಯೇಕದರ್ಶಿಗಳ ಮುಂದೆ ಆರೋಪಿಯ ಪರೇಡ್‌ ನಡೆಸಲಿದ್ದಾರೆ. ಶಾಸಕ ತನ್ವೀರ್‌ಸೇಠ್, ಪ್ರತ್ಯೇಕ ದರ್ಶಿಗಳಾದ ತನ್ವೀರ್‌ಸೇಠ್ ಗನ್ ಮ್ಯಾನ್ ಪೈರೋಜ್ ಖಾನ್, ಬೆಂಬಲಿಗರಾದ ಸುಯೇಲ್ ಬೇಗ್, ಖಾದರ್ ಸೇಠ್, ಕುರತ್, ಮುತ್ತಾಜ್, ಅಕ್ಬರ್ ಹಾಲಿ ಜೊತೆ ಇಬ್ಬರು ಪೊಲೀಸರು ಸೇರಿದಂತೆ ಹತ್ತು ಜನರಿಂದ ಆರೋಪಿಯ ಐಡೆಂಟಿಫಿಕೇಷನ್ ಪರೇಡ್ ನಡೆಸಲಿದ್ದಾರೆ.

Key words: mysore- MLA- Tanveer  Sait-  Today – parade – identity – accused.