ಹೆಚ್. ವಿಶ್ವನಾಥ್ ಗೆ ಎಂಎಲ್ ಸಿ ಸ್ಥಾನ ನೀಡಿಕೆ ವಿಚಾರ: ಜೊತೆಗಾರರನ್ನ ಕೈ ಬಿಟ್ಟ ಸಚಿವ ರಮೇಶ್ ಜಾರಕಿಹೊಳಿ…?

kannada t-shirts

ಮೈಸೂರು,ಮೇ,28,2020(www.justkannada.in): ಸಮ್ಮಿಶ್ರ ಸರ್ಕಾರದ ಪತನದ ವೇಳೆ ಜೊತೆಗಿದ್ದ ಹೆಚ್.ವಿಶ್ವನಾಥ್ ಅವರನ್ನೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೈ ಬಿಟ್ಟರೇ ಎಂಬ ಪ್ರಶ್ನೆ ಎದ್ದಿದೆ.

ಹೌದು ವಿಶ್ವನಾಥ್ ಗೆ ಎಂಎಲ್ಸಿ ಸ್ಥಾನ ನೀಡಿಕೆ ವಿಚಾರ ಕುರಿತು ಇಂದು ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಎಂಎಲ್ಸಿ ಸ್ಥಾನ ನೀಡಿವ ವಿಚಾರ ನನ್ನ ವ್ಯಾಪ್ತಿಗೆ ಬರೋದಿಲ್ಲ. ಇದರಲ್ಲಿ ಹೈಕಮಾಂಡ್ ತೀರ್ಮಾನ ವೇ ಅಂತಿಮವಾಗಿರುತ್ತೆ. ಚರ್ಚೆ ಮಾಡಿ ಯಾರಿಗೆ ಕೊಡಬೇಕು ಅನ್ನೊದನ್ನು ತೀರ್ಮಾನ ಮಾಡ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಚಿವ ರಮೇಶ್ ಜಾರಕಿಹೊಳಿ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ವಿಚಾರ. ಇನ್ನೂ ಇಲಾಖಾವಾರ ಹಂಚಿಕೆ ಆಗಿಲ್ಲ. ಕೇಂದ್ರ ಸರ್ಕಾರ ಸಂಕಷ್ಟದ ಕಾಲದಲ್ಲಿ ಅತ್ಯುತ್ತಮವಾದ ಪ್ಯಾಕೇಜ್ ಘೋಷಿಸಿದೆ.  ಜಲ ಸಂಪನ್ಮೂಲ ಇಲಾಖೆ ಎಷ್ಟು ಸಿಗುತ್ತೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಇದುವರೆಗೂ ಇಲಾಖಾವಾರು ಹಂಚಿಕೆ ಆಗಿಲ್ಲ ಎಂದು ತಿಳಿಸಿದರು.

ಕೃಷಿಗೆ ನೀರು ಹರಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಅಂತಾರಾಜ್ಯ ಮಟ್ಟದ ಸಭೆ ನಡೆದಿದೆ. ಶೀಘ್ರದಲ್ಲೇ ನೀರು ಬಿಡಲಾಗುವುದು. ಇನ್ನು ಕಾವೇರಿ, ಕಬಿನಿ ಡ್ಯಾಂಗಳು ಅಂತಾರಾಜ್ಯ ವಿವಾದ ಹೊಂದಿವೆ. ಈ ಡ್ಯಾಂಗಳಿಂದ ನೀರು ಹರಿಸುವ ಅಧಿಕಾರ ನಮಗೆ ಇಲ್ಲ. ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರದ ಸಭೆ ನಡೆದಿದೆ. ಅಧಿಕಾರಿಗಳ ಸಭೆಯಲ್ಲಿ ಯಾವಾಗ ನೀರು ಬಿಡಬೇಕು ಎಂಬುದರ ಚರ್ಚೆಯಾಗಿದೆ. ಜಲಾಶಯಗಳ ಸ್ಥಿತಿಗತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

Key words:  mysore-minister- ramesh jarkiholi-suttur math- H.Vishwanath

website developers in mysore