ಯಲಹಂಕ ಫ್ಲೈ ಓವರ್‌ಗೆ ಸಾವರ್ಕರ್ ಹೆಸರು ವಿಚಾರ: ವಿರೋಧ ವ್ಯಕ್ತಪಡಿಸಿದ ಮಾಜಿ ಸಿಎಂಗಳಿಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ…

ಮೈಸೂರು,ಮೇ,28,2020(www.justkannada.in): ಯಲಹಂಕ ಫ್ಲೈ ಓವರ್‌ಗೆ ಸಾವರ್ಕರ್ ಹೆಸರು ಇಡಲು ವಿರೋಧ ವ್ಯಕ್ತಪಡಿಸಿರುವ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ ಕುಮಾರಸ್ವಾಮಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಮೈಸೂರಿನ ಸುತ್ತೂರು ಮಠದಲ್ಲಿ ಈ ಬಗ್ಗೆ ಇಂದು ಮಾತನಾಡಿದ  ಸಂಸದ ಪ್ರತಾಪ್ ಸಿಂಹ, ವೀರ ಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅಂತಹವರ ಹೆಸರಿಡಲು ಇವರು ಯಾಕೆ ವಿರೋಧ ಮಾಡುತ್ತಾರೋ ಗೊತ್ತಿಲ್ಲ. ವಿರೋಧ ಪಕ್ಷಗಳು ಇಂತಹ ಕ್ಷುಲಕ ರಾಜಕಾರಣ ಬಿಡಬೇಕು ಜನರು ಬುದ್ದಿವಂತರಾಗಿದ್ದಾರೆ. ಕಾಂಗ್ರೆಸ್ ಈಗಲೂ ದಡ್ಡತನ ಪ್ರದರ್ಶನ ಮಾಡುತ್ತಿದೆ. ಕಾಂಗ್ರೆಸ್ ಈಗಲಾದರೂ ಎಚ್ಚೆತ್ತುಕೊಂಡು ರಚನಾತ್ಮಕವಾಗಿ ರಾಜಕೀಯ ಮಾಡಲಿ ಎಂದು ಚಾಟಿ ಬೀಸಿದರು.

ಇಂದಿರಾ ಕ್ಯಾಂಟಿನ್ ಹೆಸರುವಾಗ ಕನಕ ಕ್ಯಾಂಟಿನ್ ನೆನಪಾಗಲಿಲ್ಲವಾ?. ನಾಗರಹೊಳೆ, ಬಂಡೀಪುರ ಉದ್ಯಾನವನಕ್ಕೆ ಗಾಂಧಿ, ನೆಹರು ಫ್ಯಾಮಿಲಿ ಹೆಸರುಡುವಾಗ ಕನ್ನಡದವರ ನೆನಪಾಗಲಿಲ್ವ. ಈಗ ಮಾತ್ರ ಅವರಿಗೆ ಕನ್ನಡದವರ ನೆನಪು ಬಂತ ಎಂದು ಟೀಕಿಸಿದ ಸಂಸದ ಪ್ರತಾಪ್ ಸಿಂಹ, ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ವೀರ ಸಾವರ್ಕರ್ ಇದ್ದ ಜೈಲು ನೋಡಿ ಬರಲಿ ಎಂದು ಟಾಂಗ್ ನೀಡಿದರು.

Key words: MP-prathap simha-mysore-veera savarkar-fly over- former cm- siddaramaiah- hd kumarswamy