ಕತಾರ್‌ನಲ್ಲಿ ಸಿಲುಕಿ ಕಂಗಲಾಗಿರುವ ಕನ್ನಡಿಗರು‌.

ಮೈಸೂರು, ಮೇ 28, 2020 : (www.justkannada.in news) ಆರು ಜನರ ಎರಡು ಕುಟಂಬ ಅರಬ್ ದೇಶದ ಕತಾರ್ ನಲ್ಲಿ ಬಂಧಿಯಾಗಿದೆ. ಭಾಷೆ ಬಾರದ ದೇಶದಲ್ಲಿ ಎರಡೂವರೆ ತಿಂಗಳಿನಿಂದ ಪರದಾಡುತ್ತಿದ್ದಾರೆ.

ಸುಬ್ರಮಣ್ಯ, ಜ್ಯೋತಿ, ಗೋಪಿ, ಚಂದ್ರಕಾಂತ್, ಕುಮಾರ್, ಮೀನಾ ಕತಾರ್ ನಲ್ಲಿ ಕಷ್ಟಕ್ಕೆ ಸಿಲುಕಿದವರು. ಮೂಲತಃ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಪಕ್ಷಿರಾಜಪುರ ಗ್ರಾಮದ ನಿವಾಸಿಗಳು.

ಕಾಡಲ್ಲಿ ಸಿಗುವ ಗಿಡ ಮೂಲಿಕೆಗಳಿಂದ ವನೌಷಧಿ, ಮಸಾಜ್ ಮಾಡುವ ತೈಲವನ್ನು ಈ ಕುಟುಂಬದವರು ತಯಾರು ಮಾಡುತ್ತಿದ್ದರು.
ಕತಾರ್‌ನಲ್ಲಿ ನಡೆಯುವ ವನೌಷಧಿ ಮೇಳಗಳಲ್ಲಿ ಮಾರಾಟ ಮಾಡುವ ಸಲುವಾಗಿ, ಇದೇ ಮಾರ್ಚ್ ಮೊದಲ ವಾರದಲ್ಲಿ ಕತಾರ್ ಈ ಆರು ಜನ ತೆರಳಿದ್ದರು . ಆದರೆ ಅಲ್ಲಿ ಮೇಳ ಪ್ರದರ್ಶನ ಆರಂಭವಾಗುವ ಮೊದಲೇ ಲಾಕ್ ಡೌನ್ ಘೋಷಣೆಯಾಯ್ತು.

familys-from-karnataka-lock.down-in kathar-from-last-two-months

ಭಾರತೀಯ ರಾಯಭಾರಿ ಕಚೇರಿ ನಂಬರ್ ಪಡೆದು ತಾವು ಕನ್ನಡದವರು ಎಂದು ಹೇಳಿಕೊಂಡಿದ್ದಾರೆ. ಕನ್ನಡದವರು ಎಂದ ಕೂಡಲೇ ಭಾರತೀಯ ರಾಯಭಾರಿ ಕಚೇರಿಯವರು ಕತಾರ್ ನಲ್ಲಿರುವ ಕನ್ನಡ ಸಂಘದ ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಮಾಹಿತಿ ನೀಡಿದ್ದಾರೆ.
ಈ ಕುಟುಂಬದವರನ್ನು ವಾಪಸ್ ತಾಯ್ನಾಡಿಗೆ ಕಳುಹಿಸಲು ಅಲ್ಲಿನ ರಾಯಭಾರಿ ಕಚೇರಿ, ಕನ್ನಡ ಸಂಘದವರು ವ್ಯವಸ್ಥೆ ಮಾಡುತ್ತಿದ್ದಾರೆ.

 

key words : family’s-from-Karnataka-lock.down-in kathar-from-last-two-months