ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ ಮೈಸೂರು ಮೇಯರ್ ತಸ್ನೀಂ…

Promotion

ಮೈಸೂರು,ಡಿಸೆಂಬರ್,25,2020(www.justkannada.in):  ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಬಿಜೆಪಿ ಜತೆ ಮೈತ್ರಿಯಾಗುವ ಬಗ್ಗೆ ಸುದ್ದಿಯಾಗುತ್ತಿದೆ. ಆದರೆ ಇತ್ತ ಮೈಸೂರು ಮೇಯರ್ ತಸ್ನೀಂ ಮಾತ್ರ ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ.Teachers,solve,problems,Government,bound,Minister,R.Ashok

ಮೈತ್ರಿ ಬಗ್ಗೆ ಮಾತನಾಡಿರುವ ಮೇಯರ್ ತಸ್ನೀಂ, ನಮ್ಮದು ಜಾತ್ಯಾತೀತ ಪಕ್ಷ. ಜಾತ್ಯಾತೀತ ವಾದವನ್ನು ಉಳಿಸಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ನ ಕೆಲವು ನಾಯಕರಿಂದ ನನಗೆ ನೋವಾಗಿರುವುದು ನಿಜ. ಆದ್ರೆ ಅದನ್ನೆ ಮುಂದಿಟ್ಟಿಕೊಂಡು ಹೊಂದಾಣಿಕೆ ಕಡಿದುಕೊಳ್ಳಬಾರದು. ನನಗೆ ನೀಡಿದ ತೊಂದರೆ ರೀತಿ ಮುಂದೆ ಯಾರಿಗೂ ತೊಂದರೆ ನೀಡಬಾರದು. ಯಾರೋ ನಾಲ್ಕು ಜನ ಕಾಂಗ್ರೆಸ್ ನವರು ತೊಂದರೆ ಕೊಟ್ಟಿದ್ದಾರೆ ಅನ್ನೊ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಳ್ತೇವೆ ಅನ್ನೊದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.mysore-mayor-tasneem-expressed-his-willingness-alliance-with-congress

ಮುಂಬರುವ ಪಾಲಿಕೆ ಮೇಯರ್ ಚುನಾವಣೆ ಬಗ್ಗೆ  ನಮ್ಮ ಮುಖಂಡರ ಜೊತೆ ಸಭೆ ಮಾಡಿದ್ದೇವೆ. ಮೇಯರ್ ಚುನಾವಣೆ ವಿಚಾರವಾಗಿ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರು ಸಮ್ಮತಿ ಸೂಚಿಸಿದ್ದಾರೆ. ನಮ್ಮ ಹೈಕಮಾಂಡ್ ತೆಗೆದುಕೊಳ್ಳುತ್ತದೆಯೋ  ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಅನ್ನೋದು ಸುಳ್ಳು. ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಈ ವಿಚಾರವಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.

key words: Mysore Mayor -Tasneem –expressed- his willingness – alliance-with – Congress.