ಪ.ಬಂಗಾಳ ಸರ್ಕಾರ 70 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಲಾಭ ತಡೆ ಹಿಡಿದಿದೆ- ಪ್ರಧಾನಿ ಮೋದಿ ಕಿಡಿ…

ನವದೆಹಲಿ,ಡಿಸೆಂಬರ್,25,2020(www.justkannada.in): ದೇಶದ ಎಲ್ಲಾ ರೈತರಿಗೆ  ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಸಿಕ್ಕಿದೆ. ಆದರೆ ಪಶ್ಚಿಮ ಬಂಗಾಳದ 70 ಲಕ್ಷ ರೈತರಿಗೆ ಈ ಲಾಭ ಸಿಕ್ಕಿಲ್ಲ. ರಾಜಕೀಯ ಕಾರಣದಿಂದ ಅಲ್ಲಿನ ಸರ್ಕಾರ ಅದನ್ನ ತಡೆಹಿಡಿದಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.Teachers,solve,problems,Government,bound,Minister,R.Ashok

ಇಂದು ಕಿಸಾನ್ ಸಮ್ಮಾನ್ ದಿನಾಚಾರಣೆ ಅಂಗವಾಗಿ ರೈತರೊಂದಿಗೆ ಸಂವಾದ ನಡೆಸಿದ ಬಳಿಕ ದೇಶದ ರೈತರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ,, ಪ.ಬಂಗಾಳದಲ್ಲಿ70 ಲಕ್ಷ ರೈತರಿಗೆ ಈ ಲಾಭ ಸಿಕ್ಕಿಲ್ಲ.  ರೈತರ ಅನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದನ್ನೂ ತಡೆಹಿಡಿದಿದ್ದಾರೆ.   ಈ ಮಾತನ್ನ ಬಹಳ ನೋವಿನಿಂದ ಹೇಳುತ್ತಿದ್ದೇನೆ. ರೈತರಿಗೆ ಲಾಭ ಸಿಗದಂತೆ ಮಾಡಿದ್ದಾರೆ.  ಪ.ಬಂಗಾಳ ರೈತರಿಗೆ ಯೋಜನೆಯ ಹಣ ಸಿಗಲು ಆಂದೋಲನ ನಡೆಸಿಲ್ಲ. ಯೋಜನೆಯ ಹಣ ಸಿಗಲು ಯಾಕೆ ಆಂದೋಲನ ನಡೆಸಲಿಲ್ಲ. ಪ.ಬಂಗಾಳದ ರೈತರ ಹಿತದ ಬಗ್ಗೆ ಏನೂ ಮಾತನಾಡಲ್ಲ. ಪಂಜಾಬ್ ರೈತರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ದ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ರೈತರ ಹಿತಕ್ಕಾಗಿ ಮಾತನಾಡದ ವಿಪಕ್ಷಗಳು ದೆಹಲಿಗೆ ಬಂದು ರೈತರ ಬಗ್ಗೆ ಮಾತನಾಡುತ್ತಾರೆ. ಈ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಎ.ಪಿ.ಎಂ.ಸಿ.-ಮಂಡಿಗಳನ್ನು ಕಳೆದುಕೊಳ್ಳುತ್ತಿವೆ. ಆದರೆ ಈ ಪಕ್ಷಗಳು ಕೇರಳದಲ್ಲಿ ಎ.ಪಿ.ಎಂ.ಸಿ-ಮಂಡಿಗಳು ಇಲ್ಲ ಎಂಬುದನ್ನು ಪದೇ ಪದೇ ಮರೆತುಬಿಡುತ್ತಾರೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.kisan-samman-scheme-not-benefited-70000-farmers-west-bengal-pm-modi

ಕೇರಳಾದಲ್ಲಿ ಎಪಿಎಂಸಿಗಳೇ ಇಲ್ಲ. ಅಲ್ಲಿ ಏಕೆ ಹೋರಾಟ ಮಾಡುತ್ತಿಲ್ಲ. ರೈತರನ್ನ ದಾರಿ ತಪ್ಪಿಸುವ ಕೆಲಸ ಯಾವುದೂ ಫಲಿಸಲ್ಲ. ಹೆಡ್ ಲೈನ್ಗಾಗಿ ವಿಪಕ್ಷಗಳು ಭಾಷಣ ಮಾಡುತ್ತಿವೆ.  ಭಯದ ವಾತಾವರಣ ಸೃಷ್ಟಿಸುತ್ತಿವೆ. ನಾವು ಸ್ವಾಮಿನಾಥನ್ ಆಯೋಗ ಶಿಫಾರಸ್ಸು ಜಾರಿ ಮಾಡಿದ್ದೇವೆ.  ನಮ್ಮ ಸರ್ಕಾರ ಕ್ರಾಂತಿಕಾರಿ ಯೋಜನೆ ಜಾರಿಗೆ ತಂದಿದೆ. ಸಣ್ಣ ರೈತರಿಗೆ ಮಾರುಕಟ್ಟೆ, ವಿದ್ಯುತ್ ವ್ಯವಸ್ಥೆ ಇರಲಿಲ್ಲ.  ರೈತರಿಗೆ ಫಸಲ್ ಭೀಮಾ ಯೋಜನೆ  ಜಾರಿ ಮಾಡಿದ್ದೇವೆ. ಇದರಿಂದಾಗಿ 90 ಸಾವಿರ ಕೋಟಿ ಸಿಕ್ಕಿದೆ. ಟೀಕೆ ಮಾಡುತ್ತಿರುವವರು ರೈತರಿಗೆ ಅನುಕೂಲವಾಗುವಂತಹ ಯೋಜನೆ ಏನು ಮಾಡಿಲ್ಲ. ನಮ್ಮ ಸರ್ಕಾರ ಯಾವತ್ತೊಗೂ ರೈತರ ಹಿತ ಭಯಸುತ್ತೆ ಎಂದರು.

Key words:  Kisan Samman Scheme – not-benefited- 70,000 farmers – West Bengal-PM Modi