ತನ್ನ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನ ಹತ್ಯೆಗೈದ ವ್ಯಕ್ತಿ….

ಮೈಸೂರು,ಏಪ್ರಿಲ್,29,2021(www.justkannada.in):  ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿಯೋರ್ವ ತನ್ನ  ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ  ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.jk

ಸರಗೂರು ತಾಲೂಕಿನ ಚಾಮೇಗೌಡನ ಹುಂಡಿಯಲ್ಲಿ ಈ ಘಟನೆ ನಡೆದಿದೆ. ಮಣಿಕಂಠಸ್ವಾಮಿ ಎಂಬಾತನೇ ಈ ಕೃತ್ಯವೆಸಗಿದ್ದಾನೆ. ತಾಯಿ  ಕೆಂಪಾಜಮ್ಮ (60), ಗರ್ಭಿಣಿ ಪತ್ನಿ ಗಂಗಾ(28), ಇಬ್ಬರು ಗಂಡು ಮಕ್ಕಳಾದ ರೋಹಿತ್ (ಒಂದುವರೆ ವರ್ಷ) ಮತ್ತು ಸಾಮ್ರಾಟ್ (4) ಮೃತಪಟ್ಟವರು.mysore-man-killed-wife-mother-children

ಮದ್ಯ ವ್ಯಸನಿಯಾಗಿದ್ದ ಮಣಿಕಂಠ  ನಾಲ್ವರನ್ನೂ  ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿ ಮಣಿಕಂಠ ತಲೆ ಮರೆಸಿಕೊಂಡಿದ್ದು,  ಘಟನಾಸ್ಥಳಕ್ಕೆ ಸರಗೂರು ಪಿಎಸ್ ಐ ದಿವ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-  man -killed – wife – mother-children