‘ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೆಚ್ಚರಿಕೆ’ ಕುರಿತು  ಏ.30 ರಂದು ಡಾ.ಸಿ.ಎನ್. ಮಂಜುನಾಥ್ ಅವರೊಂದಿಗೆ ಮಾಧ್ಯಮ-ಸಂವಾದ..

ಬೆಂಗಳೂರು,ಏಪ್ರಿಲ್,29,2021(www.justkannada.in): ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೆಚ್ಚರಿಕೆ ಕುರಿತು  ಏಪ್ರಿಲ್ 30 ರಂದು ನಾಡಿನ ಹೆಸರಾಂತ ವೈದ್ಯ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರೊಂದಿಗೆ  ಮಾಧ್ಯಮ-ಸಂವಾದ ಏರ್ಪಡಿಸಲಾಗಿದೆ.jk

ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೆಚ್ಚರಿಕೆ ವಿಷಯ ಬಗ್ಗೆ  ವೆಬಿನಾರ್ ಸಂವಾದ ಏರ್ಪಡಿಸಿದೆ. ಅಲ್ಲಿ  ಪತ್ರಕರ್ತರ ಆತಂಕಗಳಿಗೆ ಒಂದಿಷ್ಟು ಉತ್ತರ ಸಿಗಬಹುದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಕೋವಿಡ್ ಸಂದರ್ಭದಲ್ಲಿ, ಸುದ್ದಿ ಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಸಿಬ್ಬಂದಿಗಳು ತೀವ್ರ ಸಂಕಷ್ಟದಲ್ಲಿ ಸಮಸ್ಯೆ ವಿರುದ್ಧ ವೃತ್ತಿ ಬದ್ಧತೆಯಿಂದ ಈಜುತ್ತಿದ್ದಾರೆ.  ಈ ದುರಿತ ಕಾಲದಲ್ಲಿ ಒತ್ತಡದಲ್ಲಿರುವ ಪತ್ರಕರ್ತರು, ಸುದ್ದಿ ಧಾವಂತಕ್ಕೆ ಬಿದ್ದು ಪ್ರಾಣತೆತ್ತ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಇಂಥದ್ದೆ ಸಂದರ್ಭವನ್ನು ಮಾಧ್ಯಮ ಕ್ಷೇತ್ರ ಎದುರಿಸಿತ್ತು. ಈಗ ಇನ್ನಷ್ಟು ಭಯಾನಕ ಸನ್ನಿವೇಶಗಳಿಗೆ ಸುದ್ದಿ ಮನೆ ಸಾಕ್ಷಿಯಾಗುತ್ತಿದೆ. ಇಂತಹ ಹೊತ್ತಿನಲ್ಲಿ ನಾವು ಕನಿಷ್ಠ ಮುಂಜಾಗ್ರತೆ ವಹಿಸುವುದು, ಮುಂದೆ ಬಂದೊದಗಬಹುದಾದ ಸನ್ನಿವೇಶವನ್ನು ಧೈರ್ಯದಿಂದ ನಿಭಾಯಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಸುದ್ದಿ ಮನೆಯಲ್ಲಿ ಪತ್ರಕರ್ತರು ಮತ್ತು ಸಿಬ್ಬಂದಿಗಳು, ಅವರ ಕುಟುಂಬದ ಕ್ಷೇಮ ಕೂಡ ಬಹುಮುಖ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಪುಟ್ಟ ಹೆಜ್ಜೆ ಇಟ್ಟಿದೆ.journalists-covid-dr-c-n-manjunath-interaction-kuwj

ನಾಡಿನ ಹೆಸರಾಂತ ವೈದ್ಯ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರೊಂದಿಗೆ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೆಚ್ಚರಿಕೆ ವಿಷಯ ಬಗ್ಗೆ  ವೆಬಿನಾರ್ ಸಂವಾದ ಏರ್ಪಡಿಸಿದೆ.  ಏಪ್ರಿಲ್ 30 ಮಧ್ಯಾಹ್ನ 12 ಗಂಟೆಗೆ ಮಾಧ್ಯಮ ಸಂವಾದ ನಡೆಯಲಿದ್ದು ಝೂಮ್ ಆ್ಯಪ್ ಮೂಲಕ ಸಂವಾದಲ್ಲಿ ಪಾಲ್ಗೊಳ್ಳಬಹುದು.

ENGLISH SUMMARY…

Media interaction on ‘Precautions required for journos during COVID’ with Dr. C.N. Manjunath on Apr. 30
Bengaluru, Apr. 29, 2021 (www.justkannada.in): A media interaction has been organized with Dr. C.N. Manjunath, of the Jayadev Institute of Cardiology, Bengaluru, on April 30, on the topic, “Precautionary measures to be followed by Journos during COVID-19 Pandemic’.
A webinar has been organized on the precautionary measures to be followed by the journalists during the pandemic, where the media persons can find answers to their many questions.
Journalists and other staff members working in the media will be working in danger during the pandemic. They will be under a lot of pressure. Journalists losing their lives during the pandemic is being reported in the media.journalists-covid-dr-c-n-manjunath-interaction-kuwj
Last year also the media sector faced a similar situation. The second wave is more dangerous putting the media persons in more danger. Hence, they need to take all the required precautions and face the situation and work with courage. The Karnataka Union of Working Journalists (KUWJ) has organized the interaction program with Dr. C.N. Manjunath in this regard. The program will be held at noon on April 30, on the ZOOM app.
Keywords: Media interaction with Dr. C.N. Manjunath/ April 30/ 12.00 pm/ KUWJ

Key words:  journalists –covid-  Dr. C.N.manjunath-interaction – KUWJ