ಉಪಟಳ‌ ನೀಡಿದ್ದ ಚಿರತೆ ಬೋನಿಗೆ: ನಿಟ್ಟುಸಿರು ಬಿಟ್ಟ ಸ್ಥಳೀಯರು…

ಮೈಸೂರು,ಜೂ,20,2020(www.justkannada.in):  ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಇಂದು ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಸೆರೆಯಾಗಿದೆ.

ಮೈಸೂರಿನ ಜಂತಕಳ್ಳಿಯ ಡಾ.ಮಧುಸುದನ್ ಎಂಬುವರರ ತೋಟ ಮನೆಯಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಸೆರೆಯಾದ ಚಿರತೆ ಹಲವು ದಿನಗಳಿಂದ ನಾಯಿಗಳ ಮೇಲೆರಗಿ ಉಪಟಳ‌ ನೀಡುತ್ತಿತ್ತು. ಈ ಕುರಿತು ಮಾಹಿತಿ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು.mysore-leopard-bone-forest-department

ಇದೀಗ ಚಿರತೆ ಸೆರೆಯಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಯಾದ ಚಿರತೆ ಕಾಡಿಗೆ ರವಾನಿಸಲು ಅರಣ್ಯ ಸಿಬ್ಬಂದಿ ಚಿಂತನೆ ನಡೆಸಿದ್ದಾರೆ.

Key words: mysore- Leopard-bone-forest department