ಮೈಸೂರಿನಲ್ಲಿ 13 ಮಂದಿ  ಕೆ.ಎಸ್.ಆರ್.ಪಿ ಸಿಬ್ಬಂದಿಗೆ ಕೊರೋನಾ ಪಾಸಿಟಿವ್: ಎಲ್ಲಾ ಸಿಬ್ಬಂದಿಗೂ ಧೈರ್ಯ ಹೇಳಿದ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ

ಮೈಸೂರು,ಜೂ,20,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾಮಾರಿ ಕೊರೊನಾ ಹೆಚ್ಚುತ್ತಿದ್ದು, ಪೋಲೀಸರನ್ನು ಕಾಡುತ್ತಿದೆ. ಹೌದು, ಮೈಸೂರಿನಲ್ಲಿ ಒಟ್ಟು 13 ಮಂದಿ ಕೆ.ಎಸ್.ಆರ್.ಪಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್  ದೃಢವಾಗಿದೆ.corona-positive-13-ksrp-staff-mysore

13 ಮಂದಿ ಕೆ.ಎಸ್.ಆರ್.ಪಿ ಸಿಬ್ಬಂದಿ ಬೆಂಗಳೂರಿಗೆ ಕರ್ತವ್ಯಕ್ಕೆ ತೆರಳಿ ಮೈಸೂರಿಗೆ ವಾಪಸ್ಸಾಗಿದ್ದರು.  ಬಳಿಲ ಮೈಸೂರಿನ ಪೊಲೀಸ್ ವಸತಿಗೃಹದಲ್ಲಿ ಕ್ವಾರಂಟೈನ್ ಆಗಿದ್ದರು. ಇದೀಗ ಎಲ್ಲಾ 13 ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದೆ.  ವಿಚಾರ ತಿಳಿದ ನಂತರ  ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಅವರು ಪೊಲೀಸ್ ವಸತಿಗೃಹ ಬಡಾವಣೆಗೆ ತೆರಳಿ ಮಾಹಿತಿ ಸಂಗ್ರಹಿಸಿದರು. ಬಳಿಕ ಎಲ್ಲಾ ಸಿಬ್ಬಂದಿಗೂ ಧೈರ್ಯ ಹೇಳಿದರು.

ಎಲ್ಲಾ 13 ಸಿಬ್ಬಂದಿಯನ್ನ ಕೋವಿಡ್ 19 ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಜಾಕಿ ಕ್ವಾಟ್ರಸ್ ಕಂಟೈನ್‌ಮೆಂಟ್ ಝೋನ್ ಆಗುವ ಸಾಧ್ಯತೆ ಇದೆ.

Key words: Corona positive – 13 KSRP-staff – Mysore