ಮೈಸೂರಿನಲ್ಲಿ ಕೆಎಸ್ ಆರ್ ಪಿ‌ ಸಿಬ್ಬಂದಿಗೆ ಕೊರೋನಾ ಸೊಂಕು ಹಿನ್ನಲೆ: ಔಷಧಿ ಸಿಂಪಡಣೆ…

ಮೈಸೂರು,ಜೂ,20,2020(www.justkannada.in): ಮೈಸೂರಿನಲ್ಲಿ 13 ಮಂದಿ ಕೆಎಸ್ ಆರ್ ಪಿ‌ ಸಿಬ್ಬಂದಿಗೆ ಕೊರೋನಾ ಸೊಂಕು ಪತ್ತೆಯಾದ ಹಿನ್ನಲೆ ನಗರದ ಜಾಕಿ ಕ್ವಾಟರ್ಸ್ ನಲ್ಲಿ ಔಷಧಿ ಸಿಂಪಡಣೆ ಮಾಡಲಾಗಿದೆ.myosre-corona-ksrp-staff-spray

ಮೈಸೂರು ಮಹಾನಗರ ಪಾಲಿಕೆ ಆರೋಗ್ಯಧಿಕಾರಿ ನಾಗರಾಜ್ ನೇತೃತ್ವದಲ್ಲಿ  ಜಾಕಿ ಕ್ವಾಟರ್ಸ್ ನಲ್ಲಿ ಔಷಧಿ ಸಿಂಪಡಣೆ ಮಾಡಲಾಯಿತು. ಬೆಂಗಳೂರಿನಲ್ಲಿ‌ ಕರ್ತವ್ಯ ನಿರ್ವಹಿಸಿ ವಾಪಸ್ಸಾಗಿದ್ದ 24 ಕೆಎಸ್ ಆರ್ ಪಿ ಸಿಬ್ಬಂದಿಗಳ ತಂಡ ಕ್ವಾರೆಂನ್ಟೈನ್ ನಲ್ಲಿತ್ತು.

ನಿನ್ನೆ 13  ಮಂದಿ ಸಿಬ್ಬಂದಿಗೆ ಕೊರೋನಾ ಸೊಂಕು ದೃಢವಾಗಿದ್ದು,  ಉಳಿದ 11 ಸಿಬ್ಬಂದಿಗಳ ವರದಿ ನೆಗೆಟಿವ್ ಬಂದಿದೆ. 13 ಮಂದಿ ಸೊಂಕೀತ ಸಿಬ್ಬಂದಿಯನ್ನ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದ್ದು,  ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Key words: myosre- Corona -KSRP -staff  -spray