ನಾನು ಒರಿಜಿನಲ್ ಜೆಡಿಎಸ್ – ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆಂಬ ಊಹಾಪೋಹಗಳಿಗೆ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಸ್ಪಷ್ಟನೆ…

Promotion

ಮೈಸೂರು,ಫೆ,14,2020(www.justkannada.in):  ತಾವು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆಂಬ ಊಹಾಪೋಹ ಹಬ್ಬಿದ ಹಿನ್ನೆಲೆ ಈ ಬಗ್ಗೆ ಮಾಜಿ ಸಚಿವ ಸಿಎಸ್ ಪುಟ್ಟರಾಜು ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ಜಿಲ್ಲೆ ಟಿ.ನರೀಸಿಪುರ ತಾಲ್ಲೂಕಿನ ಮೂಗೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆಗಾಗಿ ಸಚಿವ ಸೋಮಣ್ಣ ಆಗಮಿಸಿದ್ದರು. ಈ ವೇಳೆ ಜೆಡಿಎಸ್ ಮುಖಂಡರಾದ ಸಿ.ಎಸ್ ಪುಟ್ಟರಾಜು, ಮರಿತಿಬ್ಬೇಗೌಡ, ಕೆ.ಟಿ ಶ್ರೀಕಂಠೇಗೌಡ ಉಪಸ್ಥಿತರಿದ್ದರು.

ಸಿ.ಎಸ್ ಪುಟ್ಟರಾಜು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆಂಬ ಹಬ್ಬಿರುವ ವದಂತಿಯನ್ನ ಇದೇ ವೇಳೆ ತಳ್ಳಿ ಹಾಕಿದ ಸಿ.ಎಸ್ ಪುಟ್ಟರಾಜು, ನಾನು ಒರಿಜಿನಲ್ ಜೆಡಿಎಸ್. ಹೀಗಾಗಿ ಯಾವುದೇ ಶಂಕೆ ಬೇಡ. ದೇಗುವಲದ ವಿಚಾರವಾಗಿ ನಾವು  ಒಟ್ಟಾಗಿ ಇದ್ದೇವೆ.  ಕೆ.ಟಿ ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಎಲ್ಲರೂ ಒಟ್ಟಿಗೆ ಸೇರಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಬಿಜೆಪಿ ಸರ್ಕಾರವಿದ್ರೂ ಅನುದಾನ ಬಿಡುಗಡೆ ಮಾಡಿಸುತ್ತೇವೆ. ಕಾಂಗ್ರೆಸ್  ಸರ್ಕಾರವಿದ್ರೂ ಅನುದಾನ ಬಿಡುಗಡೆ ಮಾಡಿಸುತ್ತೇವೆ. ಜೆಡಿಎಸ್ ಇದ್ದರಂತೂ ಅಭಿವೃದ್ದಿ ವಿಚಾರದಲ್ಲಿ ನಮಗೆ ಹಬ್ಬ ಎಂದು ಹೇಳಿದರು.

Key words: mysore-I am -original –JDS- Former minister -CS Puttaraju