ಪೋಸ್ಟರ್ ಗಳಲ್ಲಿ ಹುಲಿ ಚಿತ್ರಗಳನ್ನ ಹಾಕಿಬಿಟ್ರೆ ಮೈಸೂರು ಹುಲಿ ಆಗಬಿಡ್ತಾನಾ.? ಟಿಪ್ಪು ಬಗ್ಗೆ ಸಂಸದ ಪ್ರತಾಪ್ ಸಿಂಹ ವ್ಯಂಗ್ಯ.

ಮೈಸೂರು,ಮೇ,19,2022(www.justkannada.in):  ಟಿಪ್ಪು ಸುಲ್ತಾನ್ ಮೈಸೂರು ಹುಲಿ ಯಾವಾಗ ಆಗಿದ್ದಾ? ಟಿಪ್ಪು ಯಾವ ಹುಲಿಯನ್ನ  ಕೊಂದಿತ್ನಂತೆ. ಪೋಸ್ಟರ್ ಗಳಲ್ಲಿ ಹುಲಿ ಚಿತ್ರಗಳನ್ನ ಹಾಕಿಬಿಟ್ರೆ ಮೈಸೂರು ಹುಲಿ ಆಗಬಿಡ್ತಾನಾ.? ಇದು ಟಿಪ್ಪು ಸುಲ್ತಾನ್ ಬಗ್ಗೆ ವ್ಯಂಗ್ಯವಾಡಿದ್ದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ.

ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಗೆ ಮೈಸೂರು ಹುಲಿ ಎಂಬ ಟೈಟಲ್ ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯಿದ ಸಂಸದ ಪ್ರತಾಪ್ ಸಿಂಹ, 3ನೇ ಮತ್ತು 4ನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಹೋರಾಟ ಮಾಡ್ದಾ?ಟಿಪ್ಪು ಸುಲ್ತಾನ್ ಕೋಟೆಯೊಳಗೆ ಸತ್ತಿದ್ದು, ಹುಲಿ ಎಂದಿಗೂ ಬೋನ್ ನಲ್ಲಿ ಸಾಯೋಲ್ಲ. ಟಿಪ್ಪು ಸುಲ್ತಾನ್ ಯುದ್ಧ ಮಾಡದೆ ಸಂಧಾನಕ್ಕೆ ಕಳುಹಿಸಿದ್ದ. ನಾಲ್ಕನೇ ಆಗ್ಲೋ ಮೈಸೂರು ಯುದ್ಧದಲ್ಲಿ ಹುಲಿ ಎಲ್ಲಿತ್ತು. ಕೋಟೆಯೊಳಗೆ ಸತ್ತು ಬಿದ್ದಿತ್ತು ಎಂದು ಲೇವಡಿ ಮಾಡಿದ್ದಾರೆ.

ಎಂದಿಗೂ ಮೈಸೂರು ಹುಲಿ ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರೇ.

ಯಾರೋ ನಾಲ್ಕು ಜನ ಟಿಪ್ಪು ಸುಲ್ತಾನ್ ಹುಲಿ ಅಂದ್ರು. ಟಿಪ್ಪು ಸುಲ್ತಾನ್ ಮೈಸೂರು ಹುಲಿ ಅಲ್ಲ. ಎಂದಿಗೂ ಮೈಸೂರು ಹುಲಿ ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರೇ. ನಮ್ಮ ಹುಲಿ ಕೆ.ಆರ್.ಎಸ್. ಕಟ್ಟಿದೆ. ಬೆಂಗಳೂರಿಗೆ ಕರೆಂಟ್ ಕೊಟ್ರು ಅವರೇ ಎಂದಿಗೂ ನಮ್ಮ ಹುಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಯಾವ ರಾಜ್ಯದಲ್ಲಿ ಸಿದ್ದರಾಮಯ್ಯ  ಸಿಎಂ ಆಗುತ್ತಾರೆ ಎಂಬುದು ನನಗ ಗೊತ್ತಿಲ್ಲ  

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದ್ರೆ ದಲಿತರ ಸಾಲ ಮನ್ನಾ ಮಾಡುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಯಾವ ರಾಜ್ಯದಲ್ಲಿ ಸಿದ್ದರಾಮಯ್ಯ  ಸಿಎಂ ಆಗುತ್ತಾರೆ ಎಂಬುದು ನನಗ ಗೊತ್ತಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಿದ್ರು. ಡಾ.ಜಿ ಪರಮೇಶ್ವರ್ ಸಿಎಂ ಆಗುವುದನ್ನ ತಪ್ಪಿಸಿದ್ದೇ ಸಿದ್ದರಾಮಯ್ಯ. ಜಿ. ಪರಮೇಶ್ವರ್ ಅಂಗಾಲಾಚಿದರು ಮಂತ್ರಿ ಸ್ಥಾನವನ್ನು ಕೊಡಲಿಲ್ಲ. ಕೋಲಾರದಲ್ಲಿ ಮುನಿಯಪ್ಪ ಹಾಗೂ ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯರನ್ನ ಸೋಲಿಸಿದ್ದೇ ಸಿದ್ದರಾಮಯ್ಯ ದಲಿತರಿಗೆ ಕೊಟ್ಟ ಕೊಡುಗೆ. ದಲಿತ ಸಮಾಜ ಪ್ರಜ್ಞಾವಂತ ಸಮಾಜ. ಸಿದ್ದರಾಮಯ್ಯನವರಿಗೆ ಮುಸ್ಲಿಂರಿಗೆ ಬಗ್ಗೆ ಮಾತ್ರ ವಿಶೇಷ ಕಾಳಜಿ ಇದೆ ಹೊರತು ದಲಿತ ಸಮಾಜದ ಮೇಲಲ್ಲ ಎಂದು ಟೀಕಿಸಿದರು.

Key words: mysore huli- tippu sultan-Poster – MP Pratap simha