ಎಸ್ .ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕೀಯರದ್ಧೇ ಮೇಲುಗೈ.

ಬೆಂಗಳೂರು,ಮೇ,19,2022(www.justkannada.in):  ರಾಜ್ಯದ  2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಶೇ. 85.63 ರಷ್ಟು ಫಲಿತಾಂಶ ಬಂದಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸುದ್ಧಿಗೋಷ್ಠಿ ನಡೆಸಿ ಎಸ್.ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದರು. ಒಟ್ಟು 7,30,881 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

3,72,279  ಬಾಲಕೀಯರು  ಹಾಗೂ 3,58 602 ಬಾಲಕರು ಪಾಸ್ ಆಗಿದ್ದು ಈ ಮೂಲಕ  ಶೇ.85.63ರಷ್ಟು ಫಲಿತಾಂಶ ಬಂದಿದೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.

ಶೇ. 90.29 ರಷ್ಟು ಬಾಲಕಿಯರು, ಶೇ. 81.30 ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದವರು 8,53,436 ವಿದ್ಯಾರ್ಥಿಗಳು ಈ ಪೈಕಿ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಪೂರಕ ಪರೀಕ್ಷೆ ಜೂನ್ 27ರಂದು ನಡೆಯಲಿದೆ.

Key words: SSLC- Result-annoucne-minister-BC Nagesh

ENGLISH SUMMARY…

SSLC results announced: Girls top yet again
Bengaluru, May 19, 2022 (www.justkannada.in): The 2021-22 SSLC results have been announced, with an overall pass percentage of 85.63.
The Primary and Secondary Education Minister B.C. Nagesh announced the results today at a press meet. A total number of 7,30,881 students have passed. Girls have gained an upper hand over boys this time also.
While 3,72,279 girls have passed, the number of boys who have been promoted is 3,58,602.
The total pass percentage of girls is 90.29 and boys is 81.30%. A total number of 8,53,436 students had appeared for the exams, out of which 7,30,881 of them have passed. The supplementary exam will be held on June 27.
Keywords: SSLC exams/ announced/ girls gain upper hand