ಕುತೂಹಲ ಕೆರಳಿಸಿ ಎ.ಮಂಜು  ಹಾಗೂ ಅನರ್ಹ ಶಾಸಕ ಹೆಚ್.ವಿಶ್ವನಾಥ್  ಭೇಟಿ….

ಮೈಸೂರು,ಆ,15,2019(www.justkannada.in):  ರಾಜ್ಯದಲ್ಲಿ  ರಾಜಕೀಯ ಚಟುವಟಿಕೆ ಗರಿಗೆದರಿದ್ದು ಈ ನಡುವೆ ಮಾಜಿ ಸಚಿವ, ಬಿಜೆಪಿ ಮುಖಂಡ ಎ. ಮಂಜು ಅವರು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರನ್ನ ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಮೈಸೂರಿನ ಜಲದರ್ಶಿನಿ ಅಥಿತಿ ಗೃಹದಲ್ಲಿ ಹೆಚ್.ವಿಶ್ವನಾಥ್ ಮತ್ತು ಎ. ಮಂಜು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಭಯ ನಾಯಕರು  ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಉಭಯ ನಾಯಕರಿಂದ ಚರ್ಚೆ ನಡೆಸಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದ್ದು ದ ಹುಣಸೂರು ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಎ. ಮಂಜು ಸ್ಪರ್ಧೆಗೆ ಸಿದ್ದವಾಗ್ತಿದ್ದಾರಾ ಎ.ಮಂಜು..? ಎ.ಮಂಜುಗಾಗಿ ಕ್ಷೇತ್ರ ತೊರೆಯಲು ಸಿದ್ದರಿದ್ದಾರಾ ಹಳ್ಳಿ ಹಕ್ಕಿ ಎಂದು ಪ್ರಶ್ನೆ ಮೂಡಿದೆ.

ನಮ್ಮ ವಿಶ್ವಣ್ಣ ಅವ್ರೇ ಇಲ್ವಾ ಪ್ರಬಲವಾದ ಮುಖಂಡರು ಅವರೇ ನಿಲ್ಲಲಿ-ಮಾಜಿ ಸಚಿವ ಎ.ಮಂಜು

ಹೆಚ್.ವಿಶ್ವನಾಥ್ ಅವರನ್ನ ಭೇಟಿಯಾದ ಬಳಿ ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಎ.ಮಂಜು,  ಇದೊಂದು ಕೇವಲ ಉಭಯ ಕುಶಲೋಪರಿ ಮಾತುಕತೆ. ನಾನು ಆಕಸ್ಮಿಕವಾಗಿ ಇವತ್ತು ಮೈಸೂರಿನ ಜಲದರ್ಶಿನಿಗೆ ಬಂದೆ. ನಾವಿಬ್ಬರು ಕೂಡ ಬಿಜೆಪಿ ಇದೀಗಾ ಬಿಜೆಪಿಯಲ್ಲೇ ಇದ್ದಿವಿ. ಅಂದ್ರೇ ಅವರು ಬಿಜೆಪಿಗೆ ಬಂದ್ರೇ ಖುಷಿ ಪಡುವರಲ್ಲಿ ನಾನೇ ಮೊದಲನೆಯವ ಎಂದು ತಿಳಿಸಿದರು.

ಹುಣಸೂರಿನಲ್ಲಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಎ. ಮಂಜು, ಹುಣಸೂರಿಗೆ ಸಮರ್ಥ ಅಭ್ಯರ್ಥಿಗಳು ತುಂಬಾ ಜನ ಇದ್ದಾರೆ. ನಮ್ಮ ವಿಶ್ವಣ್ಣ ಅವ್ರೇ ಇಲ್ವಾ ಪ್ರಬಲವಾದ ಮುಖಂಡರು. ಅವರೇ ಬೇಕಾದರೆ ನಿಲ್ಲಬಹುದು. ಆದರೆ ನಾನು ಮಾತ್ರ ಹುಣಸೂರಿಗೆ ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತೇ. ನಾನು ಯಾವುದೇ ಕಾರಣಕ್ಕೂ ಆಕಾಂಕ್ಷಿ ಅಲ್ಲ. ನಾನು ಹುಣಸೂರಿನಲ್ಲಿ ಪಕ್ಷ ಸಂಘಟನೆಯಲ್ಲಿ ಇರುತ್ತೇನೆ ಎಂದು ತಿಳಿಸಿದರು.

ಹುಣಸೂರು ಬೈ ಎಲೆಕ್ಷನ್ ಸ್ಪರ್ಧೆ ವಿಚಾರ: ಕಾಲಾಯ ತಸ್ಮೈ ನಮಹಃ ಎಲ್ಲವು ಕಾಲವೇ ನಿರ್ಧರಿಸುತ್ತದೆ ಎಂದ್ರು ಹಳ್ಳಿಹಕ್ಕಿ..

ಹುಣಸೂರು ಬೈ ಎಲೆಕ್ಷನ್‌ನಲ್ಲಿ ತಾವು ಸ್ಪರ್ಧೆ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ನಮ್ಮ ಪ್ರಕರಣ ಇನ್ನು ಕೋರ್ಟ್‌ನಲ್ಲಿ ಇದೆ. ಅದು ಮೊದಲು ಇತ್ಯರ್ಥವಾಗಲಿ ನಂತರ ಆ ಬಗ್ಗೆ ನೋಡೋಣ. ಕಾಲಾಯ ತಸ್ಮೈ ನಮಹಃ ಎಲ್ಲವು ಕಾಲವೇ ನಿರ್ಧರಿಸುತ್ತದೆ ಎಂದರು.

ಹಾಗೆಯೇ  ಎ.ಮಂಜು ಹುಣಸೂರಿನಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡ್ತಿಲ್ಲ. ಸುಮ್ಮನೆ ಎ.ಮಂಜು, ಯೋಗೇಶ್ವರ್ ಹೆಸರು ಕೇಳಿ ಬರುತ್ತಿದೆ ಎಂದರು.

ಸಿಬಿಐ ತನಿಖೆ ಆಗಲಿ..

ಇದೇ ವೇಳೆ ಫೋನ್ ಕದ್ದಾಲಿಕೆ ಬಗ್ಗೆ ಆಕ್ರೋಶ ಹೊರಹಾಕಿದ ಹೆಚ್.ವಿಶ್ವನಾಥ್,  ಫೋನ್ ಕದ್ದಾಲಿಕೆ ದೊಡ್ಡ ನೀಚತನ. ಅದು ಯಾರೆ ಮಾಡಿದ್ರು ಕೂಡ ಅದೊಂದು ದೊಡ್ಡ ತಪ್ಪು. ಸಿಎಂ ಆಗಿದ್ದ ರಾಮಕೃಷ್ಣ ಅವ್ರೇ ಫೋನ್ ಕದ್ದಾಲಿಕೆಯಲ್ಲಿ ಸಿಕ್ಕಿಬಿದ್ದಿದ್ರು. ಅವ್ರು ಬಹಳ ಚಾಣಾಕ್ಷರು, ಫೋನ್ ಕದ್ದಾಲಿಕೆ ಪ್ರಕರಣದಲ್ಲಿ. ಅವ್ರು ರಾಜೀನಾಮೆ ಕೊಡುವ ಸಂದರ್ಭ ಎದುರಾಯಿತು. ಈ ಪ್ರಕರಣ ಸಿಬಿಐ ತನಿಖೆ ಆಗಲಿ. ಸಮಗ್ರವಾದ ತನಿಖೆಗೆ ಒಕ್ಕೊರಲ್ಲ ಒತ್ತಾಯ ಕೇಳಿ ಬರುತ್ತಿದೆ. ಖಾಸಗಿ ವಿಚಾರ ಬಹಿರಂಗ ಮಾಡೋದು ನೀಚತನದ ಕೆಲಸ ಎಂದು ಸಿಬಿಐ ತನಿಖೆಗೆ ಒತ್ತಾಯಿಸಿದರು.

ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಹೆಸರು ಕೇಳಿ ಬಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಬೇಹುಗಾರಿಕೆ ಇಲಾಖೆ ಯಾರ ಬಳಿ ಇದೆ. ಯಾರೆ ಮುಖ್ಯಮಂತ್ರಿ ಆದರು ಅವರ ಬಳಿ ಬೇಹುಗಾರಿಕೆ ಇಲಾಖೆ ಇರತ್ತೆ. ಕುಮಾರಸ್ವಾಮಿ ಸಿಎ ಆಗಿದ್ದ ವೇಳೆ ಅವರ ಬಳಿಯೇ ಇಂಟೆಲಿಜೆನ್ಸ್ ಇಲಾಖೆ ಇರತ್ತೆ. ಹಾಗಾಗಿ ಕುಮಾರಸ್ವಾಮಿ ಅವ್ರ ಗಮನಕ್ಕೆ ಬಾರದೇ ಇದು ನಡೆದಿಲ್ಲ ಎಂದು  ಪರೋಕ್ಷವಾಗಿ ಕುಮಾರಸ್ವಾಮಿ ಮೇಲೆ ಆರೋಪ ಮಾಡಿದರು.

Key words: mysore-h.vishwanath- A.Manju-meet- Curiosity