ಮೈಸೂರು: ಸಾಲಬಾಧೆ ತಾಳಲಾರದೆ ಯುವರೈತ ಆತ್ಮಹತ್ಯೆಗೆ ಶರಣು…

Promotion

ಮೈಸೂರು,ಅ,14,2019(www.justkannada.in): ಸಾಲಬಾಧೆ ತಾಳಲಾರದೆ ಯುವ ರೈತ ವಿಷಪೂರಿತ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದ ಕಂಬ್ರಳ್ಳಿಯಲ್ಲಿ  ಈ ಘಟನೆ ನಡೆದಿದೆ. ಕಂಬ್ರಳ್ಳಿಯ ಕೆಂಡಗಣ್ಣ ಸ್ವಾಮಿ ಅವರ ಪುತ್ರ ಲಕ್ಷ್ಮಣ (37)ಮೃತಪಟ್ಟ ರೈತ.  ಲಕ್ಷ್ಮಣ್ ಕೃಷಿ ಮಾಡುವ ಉದ್ದೇಶದಿಂದ ಸುಮಾರ 5 ಲಕ್ಷ ಕೈ ಸಾಲ ಮಾಡಿದ್ದ ಎನ್ನಲಾಗಿದೆ.

ಸಾಲಗಾರರು ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದಾಗ ಗ್ರಾಮದ ಮನೆಯಲ್ಲೇ ರೈತ ಲಕ್ಷ್ಮಣ್  ವಿಷಪೂರಿತ ಮಾತ್ರೆ ಸೇವಿಸಿದ್ದು ಕೂಡಲೇ ಲಕ್ಷ್ಮಣ್ ರನ್ನ  ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಣ್ ಸಾವನ್ನಪ್ಪಿದ್ದಾರೆ.

ಮೃತರಿಗೆ ಓರ್ವ ವಿಕಲಚೇತ ಪುತ್ರಿ ಹಾಗೂ ಪುತ್ರ  ಇದ್ದಾರೆ. ಈ ಕುರಿತು ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Mysore- farmer-committing -suicide